ಧರ್ಬೆ ಯ ಮಹತ್ವ

*ಧರ್ಬೆ ಯ ಮಹತ್ವ * ಮತ್ತು 
॥ ದರ್ಭೆಯ ಬಗ್ಗೆ ಒಂದು ಸಂಪೂರ್ಣ ಮಾಹಿತಿ ॥ ನಿಮಗಾಗಿ 
ಗ್ರಹಣ ಕಾಲದಲ್ಲಿ ಸಂಭವಿಸಬಹುದಾದ ದುಷ್ಟ ಪರಿಣಾಮಗಳನ್ನು ತಡೆಯಲು ದರ್ಭೆಗಳನ್ನು ನೀರು ತಿಂಡಿ ತಿನಿಸುಗಳು ಮುಂತಾದವುಗಳ ಮೇಲೆ ಏಕೆ ಹರಡುತ್ತಾರೆ? 

ದರ್ಭೆಯನ್ನು ಅನಾದಿ ಕಾಲದಿಂದಲೂ ಪೂಜಾಕೈಂಕಾರ್ಯಗಳಲ್ಲಿ ಯಾಕೆ ಉಪಯೋಗಿಸಲಾಗುತ್ತದೆ ? 
ಬನ್ನಿ ತಿಳಿಯೋಣ. 👇

ಗರುಡ ರಾಜನು ತನ್ನ ಪರಿವಾರವನ್ನು ರಕ್ಷಿಸಿಕೊಳ್ಳಲು ನಾಗ ಕುಲದ ಕುದ್ರುವಿನ ಪರಿವಾರಕ್ಕೆ ಸಹಾಯ ಮಾಡಲು ದೇವಲೋಕಕ್ಕೆ ಹೋಗಿ ಅಮೃತ ಕಲಶವನ್ನು ತರುತ್ತಾನೆ

 ಆಗ ಆ ಕಳಶವನ್ನು ದರ್ಭೆ  ಮೇಲಿಟ್ಟು ತನ್ನ ಮಕ್ಕಳನ್ನು ಕರೆತರಲು ಹೋಗುತ್ತಾಳೆ ಕದ್ರುವು
ಆಗ ಇಂದ್ರನು ಧಾವಿಸಿ ಬಂದು ಅಮೃತ ಕಲಶವನ್ನು ಅಪಹರಿಸಿ ದೇವಲೋಕಕ್ಕೆ ಒಯ್ದುನು

ಹಾಗೆ ಕಳಸವನ್ನು ಒಯ್ಯುತ್ತಿದ್ದಾಗ ಅಮೃತದ ಕೆಲವು ಬಿಂದುಗಳು ತುಳುಕಿ ದರ್ಭೆ  ಹುಲ್ಲಿನ ಮೇಲೆ ಬಿದ್ದವು ನಂತರ ಬಂದ ಸರ್ಪಗಳು ದರ್ಭೆಯ ಮೇಲೆ ಬಿದ್ದಿದ್ದ ಅಮೃತ ಬಿಂದುಗಳನ್ನು ನೆಕ್ಕಲು ಹೋಗಿ ತಮ್ಮ ನಾಲಗೆಗಳನ್ನು ಸೀಳಿಕೊಂಡವು .

ಈ ಕಾರಣದಿಂದ ಸರ್ಪಗಳಿಗೆ ಸೀಳಿದ ನಾಲಿಗೆಗಳಾಗಿ  ದ್ವಿಜಿಹ (ಎರಡು )ಎಂಬ ಹೆಸರನ್ನು ಪಡೆದವು

ಅಮೃತ ಬಿಂದುಗಳು ತುಳುಕಿ ಈ ರೀತಿ ಧರ್ಭೆಗಳ ಮೇಲೆ ಬಿದ್ದಾಗ ಅವು ಅಮೃತತ್ವವನ್ನು ಪಡೆದು ಪವಿತ್ರಿ ಎಂಬ ಹೆಸರನ್ನು ಪಡೆದು ದರ್ಭೆಗಳು ಒಂದೇ ರೀತಿಯ ಹುಲ್ಲಾಗಿದ್ದು ಅವು ಹಿಂದೂಗಳಿಗೆ ಪರಮ ಪವಿತ್ರವಾಗಿವೆ

 ಇವುಗಳಲ್ಲಿ ಅನೇಕ ವಿಧಗಳಿವೆ ದರ್ಭೆ .ಕುಶ. ಕಾಶವೆಂಬ ವಿಶ್ವಾಮಿತ್ರ ದರ್ಭೆ . ಯಮವೆಂಬ ಧ್ಯಾನದ ಎಲೆ. ಭತ್ತದ ಗರಿ .ಜೊಂಡು .ಬಿಳಿ ಕಮಲ ಮುಂತಾದವುಗಳು

ದೇವತಾ ಕಾರ್ಯವಿರಲಿ ಪಿತೃ ಕಾರ್ಯಗಳಲ್ಲಿ ದರ್ಭೆ  ಇಲ್ಲದೆ ಮಾಡುವಂತಿಲ್ಲ ಅಲ್ಲದೆ ಈ ಸಂದರ್ಭದಲ್ಲಿ ದರ್ಭೆಯಿಂದ ಮಾಡಿದ ಪವಿತ್ರವನ್ನು ಬಲಗೈ ಉಂಗುರದ ಬೆರಳಿಗೆ ಧರಿಸಬೇಕು

ಗ್ರಹಣ ಕಾಲದಲ್ಲಿ ಸಂಭವಿಸಬಹುದಾದ ದುಷ್ಟ ಪರಿಣಾಮಗಳನ್ನು ತಡೆಯಲು ದರ್ಭೆಗಳನ್ನು ನೀರು ತಿಂಡಿ ತಿನಿಸುಗಳು ಮುಂತಾದವುಗಳ ಮೇಲೆ ಹರಡುತ್ತಾರೆ ದರ್ಬೆಯ ಆಗ್ರದಲ್ಲಿ ಶಿವನು ಮಧ್ಯದಲ್ಲಿ ವಿಷ್ಣುವು  ಬುಡದಲ್ಲಿ ಬ್ರಹ್ಮನು ಉಪಸ್ಥಿತರಿರುತ್ತಾರೆ ಎಂದು ನಂಬಲಾಗಿದೆ

ಪೂರ್ವದಲ್ಲಿ ಮಾನವರು ಬಹುವಿಧವಾದ ದಾನಗಳನ್ನು  ಮಾಡಿದರು ಆಗ ದೈತ್ಯರು ಈ ದಾನಗಳ ಫಲವನ್ನು ತಾವೇ ಪಡೆದರು ಈ ಬಗ್ಗೆ ಚಿಂತಿಸಿದ ಬ್ರಹ್ಮದೇವನು ಒಂದು ನಿಯಮವನ್ನು ಮಾಡಿದನು

 ಇನ್ನು ಮುಂದೆ ದೇವತಾ ಕಾರ್ಯಗಳಲ್ಲಿ ದರ್ಭೆ ಅಕ್ಷತೆ ಮತ್ತು ಜಲವನ್ನು ಉಪಯೋಗಿಸಬೇಕು ಹಾಗೆಯೆ ಪಿತೃ ಕಾರ್ಯಗಳಲ್ಲಿ ದರ್ಭೆ   ಅಕ್ಷತೆ ಮತ್ತು ತಿಲಗಳನ್ನು ಬಳಸಬೇಕು

ಇವುಗಳು ಯಜ್ಞಾಂಗಗಳಾಗಿ ಇರುವುದರಿಂದ ದೈತ್ಯರು ಅವುಗಳ ಹತ್ತಿರ  ಬರಲಾಗುವುದಿಲ್ಲ ಈ ರೀತಿ ದೇವತಾ ಪಿತೃ ಕಾರ್ಯಗಳನ್ನು ರಕ್ಷಿಸಲು ಪರಮಾತ್ಮನು ದರ್ಬೆ ಮತ್ತು ತಿಲಗಳನ್ನು ಸೃಷ್ಟಿಸಿದನು

ಧರ್ಭೆಗಳ ಸೃಷ್ಟಿಯ ಬಗ್ಗೆ ಪುರಾಣದಲ್ಲಿ ಒಂದು ಕಥೆಯಿದೆ ವಿಷ್ಣುವು ವರಾಹ ಅವತಾರ ತಾಳಿದಾಗ ಅವನು ಒಮ್ಮೆ ಭೂಮಿಯ ಮೇಲೆ ನಿಂತು ಮೈ ಕೆಡವಿದಾಗ ಅವನ ಶರೀರದ ಕೆಲವು ರೋಮಗಳು ಬಿದ್ದು ಧರ್ಭೆಗಳಾದವು ಎಂದು ಹೇಳಲಾಗಿದೆ ರೋಮಗಳು ಬಿದ್ದ ಸ್ಥಳವು ಬಹ್ಮಿಷ್ಮತಿ ( ದರ್ಭೆಗಳ ಪ್ರದೇಶ ) ಎಂದು ಖ್ಯಾತವಾಯಿತು ಅಲ್ಲದೆ ಅದು ಸ್ವಾಯಂಭುವ ಮನುವಿನ ರಾಜಧಾನಿಯಾಗಿತು, 
ಈಗ ದರ್ಭೆಯನ್ನು ಅನಾದಿ ಕಾಲದಿಂದಲೂ ಪೂಜಾಕೈಂಕಾರ್ಯಗಳಲ್ಲಿ ಯಾಕೆ ಉಪಯೋಗಿಸಲಾಗುತ್ತದೆ ಅನ್ನೋದನ್ನು ನೋಡೋಣ.👇

ದರ್ಭೆಯನ್ನು ವೇದಗಳ ಕಾಲದಿಂದಲೂ ದೇವರ ಆಸನ ಗ್ರಹಣಕ್ಕೆ ಮುನ್ನ ಆ ಜಾಗದಲ್ಲಿ ಇರಿಸಲಾಗುತ್ತಿತ್ತು.ಸ್ವಯಂ ಶ್ರೀ ಕೃಷ್ಣ ಪರಮಾತ್ಮನಿಂದ ಭಗವದ್ಗೀತೆಯಲ್ಲಿ ದರ್ಭೆಯನ್ನು ಧ್ಯಾನಾಸನಗಳ ಭಾಗವಾಗಿದೆ ಎಂದು ಉಪದೇಶಿಸಲಾಗಿದೆ.ಧ್ಯಾನದ ಸಮಯದಲ್ಲಿ ನಮ್ಮ ಶರೀರದಿಂದ ಮುಖ್ಯವಾಗಿ ಕಾಲು ಹಾಗೂ ಕಾಲಿನ ಬೆರಳಿನಂದ ಹೊರಹೋಗುವ ಶಕ್ತಿಯನ್ನು ತಡೆಗಟ್ಟುವುದರಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ.‍ಹೋಮ ಹವನಾದಿಗಳಲ್ಲಿ ದರ್ಭೆಯನ್ನು ಹೋಮ ಕುಂಡದ ಸುತ್ತಲೂ 4 ಬದಿಯಲ್ಲೂ ಹಾಕಲಾಗುವುದು ಇದನ್ನು ಪರಿಸ್ಥರಣ ಅನ್ನುತ್ತಾರೆ.
ಅಂದರೆ ಇದು ದೇವರ ಆಸನವಾಗಿದೆ. 

 ಹಿಂದೆ ಸಮುದ್ರ ಮಥನದ ಸಂದರ್ಭದಲ್ಲಿ ಮಹಾವಿಷ್ಣು ಮಂದರ ಪರ್ವತಕ್ಕೆ ಆಸರೆಯಾಗಲು ಕೂರ್ಮಾವತಾರ ತಾಳಿದಾಗ ಆಮೆಯ ಮೈಯ ಕೆಲವು ರೋಮಗಳು ಮಂಥನದ ಘರ್ಷಣೆಯಿಂದ ಉದುರಿ ಸಮುದ್ರದಲ್ಲಿ ಬೀಳುತ್ತವಂತೆ.ಇವುಗಳೇ ಕ್ರಮೇಣ ಕುಶ ಆಗಿ ಕರೆಯಲ್ಪಡುತ್ತವೆ.

ದರ್ಭೆಯಿಂದ ಮಾಡುವ ಪವಿತ್ರವನ್ನು ಪುರುಷನು ತನ್ನ ಬಲಕೈ ಯ ಉಂಗುರದ ಬೆರಳಿಗೆ ಧರಿಸುತ್ತಾನೆ.ಅಶುಭ ಸಂದರ್ಭಗಳಾದ ಸಾವು ಮೊದಲಾದ ಸಂದರ್ಭಗಳಲ್ಲಿ ಒಂದೇ ಎಳೆಯ ದರ್ಭೆಯನ್ನೂ,ನಿತ್ಯ ಪೂಜೆ ಹಾಗೂ ಶುಭ ಸಂದರ್ಭಗಳಲ್ಲಿ ಎರಡು ಎಳೆಯ ದರ್ಭೆಯನ್ನೂ,ಅಮಾವಾಸ್ಯೆ ಹಾಗೂ ಶ್ರಾದ್ಧ ಕರ್ಮಾದಿಗಳಲ್ಲಿ 3 ಎಳೆಯ ದರ್ಭೆಯನ್ನೂ ಮತ್ತೂ ದೇವಸ್ಥಾನಗಳಲ್ಲಿ ಮಾಡಲಾಗುವ ಪೂಜೆಗಳಲ್ಲಿ 4 ಎಳೆಯ ದರ್ಭೆಯನ್ನೂ ಪವಿತ್ರವಾಗಿ ನಮ್ಮ ಬಲಗೈ ಉಂಗುರದ ಬೆರಳಲ್ಲಿ ಧರಿಸಲಾಗುತ್ತದೆ.
ಮನೆಯಲ್ಲಿ ನಾವು ಮಾಡುವ ಯಾವುದೇ ಕಾರ್ಯಕ್ರಮದ ಮೊದಲಿಗೆ “ಪುಣ್ಯಾಹವಾಚನ”ಎಂಬುದಾಗಿ ಮಾಡುತ್ತಾರೆ;ಅಂದರೆ ಕಾರ್ಯಕ್ರಮ ನಡೆಯುವ ಜಾಗದ ಶುದ್ದೀಕರಣ.ಇಲ್ಲಿ ದರ್ಭೆಯ ಒಂದು ಗೊಂಚಲನ್ನು ಹಿಡಿದು ಅದರ ತುದಿಯಿಂದ ಎಲ್ಲ ಪೂಜಾ ಸಾಮಗ್ರಿಗಳ ಮೇಲೂ,ಆ ಜಾಗದ ಪ್ರತೀ ಮೂಲೆಗಳಲ್ಲೂ,ಹಾಗೂ ಅಲ್ಲಿರುವವರ ಮೇಲೂ ನೀರನ್ನು ಪ್ರೋಕ್ಷಣೆ ಮಾಡಲಾಗುತ್ತದೆ.
ದರ್ಭೆಯ ತುದಿಯಲ್ಲಿ ಧ್ವನಿ ಸಂವೇದನಾ ಕಂಪನಗಳನ್ನುಂಟು ಮಾಡುವ ಶಕ್ತಿಯು ಇದೆ ಎಂದು ಹೇಳಲಾಗುತ್ತದೆ.
ದರ್ಭೆಯಲ್ಲಿರುವ ಕಂಪನಾ ಶಕ್ತಿಯನ್ನು ಪಾತ್ರದಲ್ಲಿರುವ ನೀರು ಹೀರಿಕೊಳ್ಳುತ್ತದೆ.ಈ ನೀರು ಎಲ್ಲೆಲ್ಲಿ ಪ್ರೋಕ್ಷಣೆಯಾಗುತ್ತೋ ಅಲ್ಲಲ್ಲಿ ಶಕ್ತಿಯ ಸಂಚಲನ ಉಂಟಾಗುತ್ತದೆ ಎಂದು ಅದಕ್ಕಾಗಿ ಅನಾದಿ ಕಾಲದಿಂದಲೂ ನಮ್ಮ ಹಿಂದೂ ಧರ್ಮದಲ್ಲಿ ಈ ಸಂಪ್ರದಾಯವು ನಡೆದುಕೊಂಡು ಬರುತ್ತಿದೆ.
ಹೀಗಾಗಿ ತುದಿಗಳಿಲ್ಲದ ದರ್ಭೆಯನ್ನು ಉಪಯೋಗಿಸುವಂತಿಲ್ಲ,
ಯಾಕಂದ್ರೆ ಇದರಲ್ಲಿ ಪ್ರವಹನಾ ಶಕ್ತಿಯು ನಷ್ಟವಾಗಿರುತ್ತದೆ.
ಧಾರ್ಮಿಕ ಪರಂಪರೆಯ ಪ್ರಕಾರ ದರ್ಭೆಯನ್ನು ಎಲ್ಲ ದಿನಗಳಲ್ಲೂ ಕೀಳುವಂತಿಲ್ಲ ಹಾಗೂ ತುಂಡರಿಸುವಂತಿಲ್ಲ.ಇದನ್ನು ಕೇವಲ ಹುಣ್ಣಿಮೆಯ ಮರುದಿನ ಬರುವ ಕೃಷ್ಣ ಪಕ್ಷದ ಪಾಡ್ಯದಂದು ಮಾತ್ರ ಕೀಳಲಾಗುತ್ತದೆ.
ಕೆಲವೊಂದು ಸಂಶೋಧನೆ ಯಿಂದ
 ಈ ದರ್ಭೆಯನ್ನು ಅಂಗೈಯಲ್ಲಿಟ್ಟು ‍ಎಕ್ಸ್ ರೇ ಸಹಾಯದೊಂದಿಗೆ ಪರೀಕ್ಷಿಸಿದಾಗ ಇದು ಎಕ್ಸ್ ರೇಯ 60% ಕಿರಣವನ್ನು ಹೀರಿಕೊಳ್ಳುತ್ತದೆ ಎಂದು ತಿಳಿದುಬಂತು.ಇಂತಹ ಪ್ರಭಾವಶಾಲಿ ಎಕ್ಸ್ ರೇ ಕಿರಣಗಳನ್ನೆ ಈ ದರ್ಭೆಯು ಹೀರಿಕೊಳ್ಳುವಾಗ ಪ್ರಕೃತಿಯಲ್ಲಿನ ಕೆಟ್ಟ ನಕಾರತ್ಮಕ ವ್ಯಾಧಿಗ್ರಸ್ಥ ಕಿರಣಗಳನ್ನು ಇವು ಹೀರಲಾರವೆ?
ಅನೇಕ ವರುಷಗಳಿಂದಲೂ ಮನೆಯ ಹಿರಿಯರು ಚಂದ್ರ ಹಾಗೂ ಸೂರ್ಯ ಗ್ರಹಣ ದ ಸಂದರ್ಭದಲ್ಲಿ ಗ್ರಹಣ ದಿಂದ ಬರುವ ಅಲ್ಟ್ರ ವೈಲೆಟ್ ಕಿರಣಗಳಿಂದ ನೀರು ಹಾಗೂ ಆಹಾರ ಸಾಮಾಗ್ರಿಗಳನ್ನುರಕ್ಷಿಸಲು ಇವುಗಳ ಮೇಲೆ ಈ ದರ್ಭೆಯನ್ನು ಇಡುತ್ತಿದ್ದರು.ಇಂದಿಗೂ ಈ ಪ್ರತೀತಿ ಜಾರಿಯಲ್ಲಿದೆ.
ಅಯುರ್ವೇದದಲ್ಲಿ ಇದಕ್ಕೆ ತನ್ನದೇ ಆದ ಮಹತ್ವ ಇದೆ.ಅನೇಕ ಸಂದರ್ಭಗಳಲ್ಲಿ ವಿಶೇಷವಾಗಿ ಭೇದಿ,ಋತುಸ್ರಾವ ಹಾಗೂ ಮೂತ್ರ ಸಂಬಂಧಿ ದೋಷ ಮೊದಲಾದವುಗಳಲ್ಲಿ ಇವು ಚಿಕಿತ್ಸಾತ್ಮಕ ಶಕ್ತಿಯಾಗಿಯೂ ಪರಿಣಮಿಸುತ್ತದೆ.
ಹಿಂದೆ ಭಗವಂತನು ದೇವತೆಗಳಿಗೆ ಹಾಗೂ ಮನುಷ್ಯರಿಗೆ ಮಾಧ್ಯಮವಾಗಿ ಯಜ್ಞವನ್ನು ಸೃಷ್ಟಿಸಿದನು.

ಆದರೆ ಆ ಯಜ್ಞದ ಆಹುತಿ ದೇವತೆಗಳಿಗೆ ತಲುಪುತ್ತಿರಲಿಲ್ಲ.

ಅದರಂತೆ ಮನುಷ್ಯನು ಮಾಡಿದ ಶ್ರಾದ್ಧವೂ ಪಿತೃದೇವತೆಗಳಿಗೆ ತಲುಪುತ್ತಿರಲಿಲ್ಲ. ಯಾಕೆಂದರೆ ಯಜ್ಞವನ್ನು ಹಾಗೂ ಶ್ರಾದ್ಧವನ್ನು ರಾಕ್ಷಸರು ಮುಟ್ಟಿ ಅದನ್ನು ಅಶುಚಿ ಮಾಡುತ್ತಿದ್ದರು. ಆಗ ದೇವತೆಗಳು ಮತ್ತು ಪಿತೃಗಳು ಭಗವಂತನನ್ನು ಪ್ರಾರ್ಥಿಸಲು ಭಗವಂತನು ವರಾಹ ರೂಪಿಯಾಗಿ ಬಂದು ತನ್ನ ರೋಮದಿಂದ ದರ್ಭೆಯನ್ನು ಸೃಷ್ಟಿಸಿ ಅದನ್ನು ಯಜ್ಞ ಹಾಗೂ ಶ್ರಾದ್ಧದ ರಕ್ಷಣೆಗೆ ನೀಡಿದನು. ಅಂದಿನಿಂದ ದರ್ಭೆಯ ಸ್ಪರ್ಶವಾದರೆ ದೈತ್ಯರು ಓಡಿಹೋಗುತ್ತಾರೆ. ಆದ್ದರಿಂದ ದರ್ಭೆಯಿಲ್ಲದೆ ಯಜ್ಞವನ್ನು ಹಾಗೂ ಶ್ರಾದ್ಧವನ್ನು ಮಾಡಲೇ ಬಾರದು.

"ಕುಶಮೂಲೇ ಸ್ಥಿತೋ ಬ್ರಹ್ಮಾ ಕುಶಮಧ್ಯೇ ತು ಕೇಶವಃ
ಕುಶಾಗ್ರೇ ಶಂಕರಂ ವಿದ್ಯಾತ್ ಸರ್ವದೇವಾಃ ಸಮಂತತಃ।। (ದೇವಲ)

ದರ್ಭೆಗಳು ಏಳು ವಿಧವಾಗಿದೆ.

ವಿಶ್ವಾಮಿತ್ರಾಃಕುಶಾಃಕಾಶಾಃದೂರ್ವಾ ವ್ರೀಹಯ ಏವ ಚ
ಬಲ್ವಲಾಶ್ಚ ಯವಾಶ್ಚೈವ ಸಪ್ತದರ್ಭಾಃ ಪ್ರಕೀರ್ತಿತಾಃ।।

ಇದರಲ್ಲಿ ರುದ್ರಸಂಬಂಧ ಹಾಗೂ ಆಭಿಚಾರ ಕೃತ್ಯದಲ್ಲಿ ಕಾಶ ಎಂಬ ದರ್ಭೆಯನ್ನು, ಶ್ರೌತ ಸ್ಮಾರ್ತ ಕರ್ಮಗಳಲ್ಲಿ ಕುಶವನ್ನೂ, ಋಷಿ ಪೂಜಾಗಳಲ್ಲಿ ದೂರ್ವಾವನ್ನೂ, ವೈಷ್ಣವ ಸಂಬಂಧಿ ಕಾರ್ಯದಲ್ಲಿ ವಿಶ್ವಾಮಿತ್ರ ದರ್ಭೆಯನ್ನು ಉಪಯೋಗಿಸಬೇಕೆಂದು ಶಾಸ್ತ್ರವು ತಿಳಿಸುತ್ತದೆ. ‌

"ಕಾಶಂ ತು ರೌದ್ರಂಮಾಖ್ಯಾತಂ ಕುಶಂ ಬ್ರಾಹ್ಮಂ ತಥಾ ಸ್ಮೃತಮ್
ದೂರ್ವಾತ್ವಾರ್ಷಂ ಸಮಾಖ್ಯಾತಂ ವಿಶ್ವಾಮಿತ್ರಂ ತು ವೈಷ್ಣವಮ್ ।। (ಹಾರೀತ)

ಕುಶಂ ತು ಸರ್ವಕಾರ್ಯೇಷು ಪವಿತ್ರಂ ಸ್ಮೃತಮ್

ಎಂಬ ವಾಕ್ಯದಂತೆ ಇದು ಯಾವುದೇ ಇಲ್ಲದಿದ್ದರೆ ಕುಶ ಎಂಬ ದರ್ಭೆಯನ್ನು ಎಲ್ಲಾ ಕಾರ್ಯಗಳಲ್ಲಿಯೂ ಉಪಯೋಗಿಸಬಹುದು.

‌ ದರ್ಭೆಯನ್ನು ಯಾವಾಗ ಆಹರಣ ಮಾಡಬೇಕು ?

"ಮಾಸೇ ನಭಸ್ಯಮಾವಾಸ್ಯಾ ತಸ್ಯಾಂ ದರ್ಭೋಚ್ಚಯೋ ಮತಃ
ಅಯಾತಯಾಮಾಸ್ತೇ ದರ್ಭಾಃ ನಿಯೋಜ್ಯಾಃ ಸ್ಯುಃ ಪುನಃ ಪುನಃ ।।(ಹಾರೀತ)

🍁ಶ್ರಾವಣ ಮಾಸದ ಅಮಾವಾಸ್ಯೆಯಂದು ಕತ್ತರಿಸಿ ತಂದ ದರ್ಭೆಯು ಯಾತಯಾಮವಾಗದೇ ಯಾವತ್ತೂ ಕಾರ್ಯಗಳಿಗೆ ಬಳಸಬಹುದು.

🍁ಬೇರೆ ಅಮಾವಾಸ್ಯೆಯಂದು ತಂದ ದರ್ಭೆಯನ್ನು ಒಂದು ತಿಂಗಳು ಮಾತ್ರ ಬಳಸಬೇಕು.

🍁ಹುಣ್ಣಿಮೆಯಂದು ತಂದ ದರ್ಭೆಯು 15 ದಿನಗಳ ಕಾಲ ಶುದ್ಧ.

🍁ಮಹಾಲಯ ಅಮಾವಾಸ್ಯೆಯಂದು ತಂದ ದರ್ಭೆಯು 6 ತಿಂಗಳು ಶುದ್ಧ.

🍁ಭಾನುವಾರ ತಂದರೆ 1 ವಾರ. 🍁ಆಯಾಯ ದಿನ ತಂದರೆ ಆಯಾಯ ದಿನ ಮಾತ್ರ ಶುದ್ಧ. ‌ ಶ್ರಾವಣ ಅಮಾವಾಸ್ಯೆಯಂದು ಕತ್ತರಿಸಿ ತಂದ ದರ್ಭೆಯ ಜೊತೆಗೆ ಉಳಿದದ್ದನ್ನು ಸೇರಿಸಿದರೆ ಎಲ್ಲವೂ ಶುದ್ಧವಾಗಿ ಯಾವಾಗಲೂ ಬಳಸಬಹುದು.

‌ ದರ್ಭೆಯ ಬಗ್ಗೆ ಇನ್ನೂ ಕೆಲವು ಚಿಂತನೆಗಳು

"ಅಗ್ರಸ್ಥೂಲಂ ಭವೇನ್ನಾರೀ ಮೂಲಸ್ಥೂಲಂ ನಪುಂಸಕಂ
ಮೂಲಾದಗ್ರಸಮಂ ಪುಂಸಾಂ ದರ್ಭಾಣಾಂ ಚೈವ ಲಕ್ಷಣಮ್ ।। "

ಹೀಗೆ ದರ್ಭೆಯಲ್ಲಿ ಸ್ತ್ರೀ, ಪುಂ, ನಪುಂಸಕ ಎಂದು ಮೂರು ವಿಧವಾಗಿದೆ.

ಯಾವ ಯಾವ ಕಾರ್ಯಗಳಿಗೆ ಯಾವ ಯಾವ ದರ್ಭೆಯನ್ನು ಬಳಸಬೇಕು?

ವಿವಾಹೇ ಚೈವ ಪುಂದರ್ಭಾಃ ಸ್ತ್ರೀದರ್ಭಾಃ ಚೈವ ಪುಂಸುವೇ
ಅನ್ಯಕರ್ಮಸು ಷಂಡಾಃಸ್ಯುಃ ದರ್ಭಾಣಾಂ ಚೈವ ಲಕ್ಷಣಮ್ ।।

ವಿವಾಹಾದಿ ಪುರುಷ ಸಂಸ್ಕಾರದಲ್ಲಿ ಪುಂದರ್ಭೆಯನ್ನೂ, ಪುಂಸವನಾದಿ ಸ್ತ್ರೀಸಂಸ್ಕಾರಗಳಲ್ಲಿ ಸ್ತ್ರೀದರ್ಭೆಯನ್ನೂ, ಇತರ ಕರ್ಮಗಳಿಗೆ ನಪುಂಸಕ ದರ್ಭೆಯನ್ನು ಬಳಸಬೇಕು.

ಪ್ರಾದೇಶಮಾತ್ರದ ಎರಡು ದರ್ಭೆಯು ಪವಿತ್ರ ಎನಿಸಿಕೊಳ್ಳುತ್ತದೆ. (ಅನಖಚ್ಛೇದಿತ, ಸಮೌ, ಸಾಗ್ರೌ, ತುಲ್ಯೌ ಪವಿತ್ರಾರ್ಥಂ ಗೃಹೀತ್ವಾ ಎಂದು ಅಗ್ನಿಮುಖದಲ್ಲಿ ಹೇಳಿದ ಪವಿತ್ರ ಇದೇ)

"ವಿಚ್ಛಿನ್ನಾಗ್ರಂ ತೃಣಂ ಪ್ರೋಕ್ತಂ ಅವಿಚ್ಛಿನ್ನಂ ಪವಿತ್ರಕಮ್
ಪ್ರಾದೇಶಮಾತ್ರಂ ದರ್ಭಾಶ್ಚ..........
ಸಂಗ್ರಹಿಸಿದ ಮಾಹಿತಿ....
********

ದರ್ಬೆ ಹುಲ್ಲಿನ ಉಂಗುರದ ಮಹತ್ವ

ಈ ಪವಿತ್ರ ಉಂಗುರ ದರಿಸುವುದು, ಯಾವುದೇ ಪೂಜಾ, ಯಜ್ಞ, ಹೋಮ, ಹವನಗಳಲ್ಲಿ ನಡೆದುಕೊಂಡು ಬಂದ ಒಂದು ಸುಂದರ ಪುರಾತನ ಸಂಪ್ರದಾಯ. ಸಾಮಾನ್ಯವಾಗಿ ಬ್ರಾಹ್ಮಣರು ಮತ್ತು ಶ್ರೀವೈಷ್ಣವರು ನಿರ್ದಿಷ್ಟವಾಗಿ ಮಂಗಳಕರವಾಗಿರಲಿ ಅಥವಾ ಅಶುಭ ಕಾರ್ಯಕ್ರಮಗಳಗಳನ್ನು ನಿರ್ವಹಿಸುವ ವ್ಯಕ್ತಿ ದರ್ಬೆ ಹುಲ್ಲನ್ನು ನಿರ್ದಿಸ್ಟ್ ವಾದ ರೀತಿಯಲ್ಲಿ ಉಂಗುರ ಮಾಡಿ ಬಲ ಕೈಯ ಉಂಗುರ ಬೆರಳಿಗೆ ಹಾಕುತ್ತಾರೆ.

ನಾವು ಯಾವ ವೃತವಾಗಲಿ ಯಜ್ಞ ಯಾಗಾದಿಗಳಾಗಲಿ ಪೂಜಾದಿಗಳಾಗಲಿ ಇದನ್ನು ಆಚರಿಸುವಾಗ ಭಗವಂತನ ಶಕ್ತಿಯ ಜೊತೆಗೆ ದುಷ್ಟ ಶಕ್ತಿಯೂ ಇರುತ್ತವೆ. ಆಗ ನಮ್ಮ ಕೈಯಲ್ಲಿರುವ ದರ್ಭೆಯ ದರ್ಶನ ಮಾತ್ರದಿಂದ ದುಷ್ಟ ಶಕ್ತಿಯು ಅಲ್ಲಿಂದ ಓಡಿ ಹೋಗುತ್ತವೆ. ಇದು ಇಂದ್ರನ ವಜ್ರಾಯುಧವಿದ್ದಂತೆ. ಆದ್ದರಿಂದ ದರ್ಭೆಯನ್ನು ಬಳಸುತ್ತೇವೆ. ಈ ಧರ್ಭೆಯು ದೇವಲೋಕದಿಂದ ಯಜ್ಞ ಯಾಗಾದಿಗಳಿಗೆಂದೆ ಭೂ ಲೋಕಕ್ಕೆ ಭಗವಂತನು ಕಳಿಸಿರುತ್ತಾನೆ.

ಬ್ರಹ್ಮ ದೇವನು ಸೃಷ್ಠಿಯನ್ನು ಮಾಡುವವನು, ವಿಷ್ಣುವು ಸ್ಥಿತಿಕರ್ತನು, ಶಿವನು ಲಯಕರ್ತನು. ಒಮ್ಮೆ ಶಿವನಿಗೆ ತಾನೇ ಎಲ್ಲರಿಗೂ ಮೇಲೆಂದು ಅಹಂಕಾರ ಬಂದಿತು. ಆ ಕಡೆ ಸೃಷ್ಠಿಕರ್ತ ಬ್ರಹ್ಮನಿಗೂ ತಾನೇ ಮೇಲೆಂದು ಅಹಂಕಾರ ಬಂದಾಗ ಇಬ್ಬರ ವಾದ-ವಿವಾದದಲ್ಲಿ ಶಿವನು ಬ್ರಹ್ಮನ ನಾಲ್ಕನೇ ತಲೆಯನ್ನು ತನ್ನ ಕೈಯಿಂದ ಕಿತ್ತು ತೆಗೆದಾಗ ಬ್ರಹ್ಮಹತ್ಯಾದೆ ದೋಷ ಬಂದಿತು ಹಾಗೂ ಜಗತ್ತೂ ದೋಷಯುಕ್ತವಾಯಿತು.

ಯಜ್ಞ-ಯಾಗಾದಿಗಳನ್ನು ಮಾಡುವುದು ಕಠಿಣವಾಯಿತು. ಆಗ ಎಲ್ಲಾ ದೇವತೆಗಳು ಮತ್ತು ಋಷಿಮುನಿಗಳು ಸೇರಿ ಈ ಎಲ್ಲಾ ದೋಷ ನಿವಾರಣೆಗೆ ದರ್ಭೆಯನ್ನು ಭೂಲೋಕಕ್ಕೆ ತರಬೇಕಾಯಿತು ಮತ್ತು ಶಿವನು ತನ್ನ ಹೆಬ್ಬೆರಳು ಮತ್ತು ಉಂಗುರ ಬೆರಳಿನಿಂದ ಬ್ರಹ್ಮನ ಶಿರವನ್ನು ತೆಗೆದುದರಿಂದ ಶುದ್ಧಿಗಾಗಿ ಪೂಜಾ ಅಧಿಕಾರ ಪ್ರಾಪ್ತಿಗಾಗಿ ದರ್ಭೆಯ ಪವಿತ್ರ ಉಂಗುರ ಧರಿಸಬೇಕೆಂದು ನಿಯಮಿಸಲಾಯಿತು. ಇದು ದರ್ಭೆಯ ಮಹತ್ವ.

ಸಾಮಾನ್ಯ ಎಲ್ಲಾ ಕಾರ್ಯಗಳಲ್ಲಿ ೨ ಅಥವಾ ೪ ದರ್ಭೆಯಿಂದ ಮಾಡಿದ ಪವಿತ್ರವನ್ನು ಯಾಗಾದಿಗಳಲ್ಲಿ ೫ ದರ್ಭೆಯಿಂದ ಮಾಡಿದ ಪವಿತ್ರವನ್ನು ಪಿತೃಕಾರ್ಯಗಳಲ್ಲಿ ೩ ದರ್ಭೆಯಿಂದ ಮಾಡಿದ ಪವಿತ್ರವನ್ನು ಧರಿಸಬೇಕು.

ದರ್ಬೆ ಹುಲ್ಲು ಮೇಲ್ನೋಟಕ್ಕೆ ದರ್ಬೆ ವ್ಯರ್ಥವಾಗಿ ಬೆಳೆಯುವ ಹುಲ್ಲು . ಆದರೆ ವಾತಾವರಣದಲ್ಲಿರುವ ದುಷ್ಟಶಕ್ತಿಯನ್ನು ನಿಯಂತ್ರಿಸುವ ಅಮೋಘ ಶಕ್ತಿ ದರ್ಬೆಗಿದೆ. ಅದಕ್ಕಾಗಿ ಯಜ್ಞ-ಯಾಗದಿಗಳಲ್ಲಿ ದರ್ಬೆಯನ್ನು ಉಂಗುರವಾಗಿ ಧರಿಸುತ್ತಾರೆ ಹಾಗು ದುಷ್ಟ ಶಕ್ತಿ ನಿಯಂತ್ರಕವಾಗಿ ಯಜ್ಞಕುಂಡದ ಸುತ್ತಲೂ ದರ್ಬೆಯನ್ನು ಇಡುತ್ತಾರೆ.
ಎಲ್ಲರಿಗೂ ಧನ್ಯವಾದಗಳು . 🙏
ಸರ್ವಜನ ಸುಖಿನೋಭವಂತು

With thanking.. Source - 
ಡಾ ಬಾಲಕೃಷ್ಣ ಗುರೂಜೀ........

ಓಂಕಾರ

'ಓಂಕಾರ'

ಓಂಕಾರ ಒಂದು ಬೀಜಾಕ್ಷರ. ಈ ಬೀಜಾಕ್ಷರವನ್ನು ಬಿಡಿಸಿದರೆ ಅದು ಸಮಸ್ತ ಭಾರತೀಯ ತತ್ತ್ವ ಶಾಸ್ತ್ರವನ್ನು ತನ್ನ ಗರ್ಭದಲ್ಲಿ ಧರಿಸಿದೆ ಎನ್ನುವುದು ನಮಗೆ ತಿಳಿಯುತ್ತದೆ. ವೇದದ ಸಾರ 'ಓಂಕಾರ'-ಅದೇ ಪ್ರಣವಃ.

ವೇದಗಳು ಅನೇಕ. ಋಗ್ವೇದದಲ್ಲಿ 24 ಶಾಖೆ, ಯಜುರ್ವೇದದಲ್ಲಿ 101 ಶಾಖೆ, ಸಾಮವೇದದಲ್ಲಿ 1000 ಶಾಖೆ, ಅಥರ್ವವೇದದಲ್ಲಿ 12 ಶಾಖೆ.

 ಹೀಗೆ ಒಟ್ಟು 1137 ಸಂಹಿತೆಗಳು. ಅದಕ್ಕೆ ಅಷ್ಟೇ ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ತುಗಳು. ಹೀಗೆ ವೇದವೆಂದರೆ ವಿಪುಲವಾದ ವೈದಿಕ ವಾಙ್ಮಯ. ಎಷ್ಟೇ ವೇದಗಳಿದ್ದರೂ ಕೂಡಾ, ಮೂಲತಃ ವೇದದಲ್ಲಿ ಪ್ರಮುಖವಾದ ಮೂರು ವಿಭಾಗವಿದೆ. 

ಪದ್ಯರೂಪ(ಋಗ್ವೇದ), ಗದ್ಯರೂಪ(ಯಜುರ್ವೇದ) ಮತ್ತು ಗಾನರೂಪ(ಸಾಮವೇದ). ಈ ಮೂರು ವೇದಗಳ, ಮೂರು ಅಕ್ಷರಗಳನ್ನು ತೆಗೆದುಕೊಂಡು ನಿರ್ಮಾಣವಾಗಿರುವುದು ಓಂಕಾರ. 

“ಓಂಕಾರಕ್ಕೆ ಸಾರತ್ವವನ್ನು ಕೊಟ್ಟು ಸಾರಭೂತನಾಗಿ ‘ಪ್ರಣವಃ’ ಶಬ್ದವಾಚ್ಯನಾಗಿ ನಾನು ಓಂಕಾರದಲ್ಲಿ ನೆಲೆಸಿದ್ದೇನೆ” ಎಂದು ಗೀತೆಯಲ್ಲಿ ಸ್ವಯಂ ಭಗವಂತನೇ ಹೇಳಿದ್ದಾನೆ(ಗೀತಾ-೭-೦೮). 

ಇದು ಬಹಳ ವಿಚಾರಗರ್ಭಿತ ಸಂಗತಿ. ಪ್ರಾಚೀನರು ಮೂರು ವೇದಗಳನ್ನು ಭಟ್ಟಿ ಇಳಿಸಿ, ಅದರ ಸಾರವಾದ ಮೂರು ವರ್ಗಗಳ ಒಂದು ಸೂಕ್ತ ಮಾಡಿದರು.

 ಅದೇ ಪುರುಷಸೂಕ್ತ. ಈ ಕಾರಣದಿಂದ ವೇದಸೂಕ್ತಗಳಲ್ಲೇ ಪುರುಷಸೂಕ್ತ ಅತ್ಯಂತ ಶ್ರೇಷ್ಠವಾದ ಸೂಕ್ತ. ಈ ಸೂಕ್ತವನ್ನು ಮತ್ತೆ ಭಟ್ಟಿಇಳಿಸಿ, ಮೂರು ಪಾದಗಳ ಗಾಯತ್ತ್ರಿ ಮಂತ್ರ(ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್) ನಿರ್ಮಾಣವಾಯಿತು. 

ಇಲ್ಲಿ ‘ತತ್ ಸವಿತುರ್ ವರೇಣ್ಯಂ’ ಋಗ್ವೇದಕ್ಕೆ ಸಂಬಂಧಪಟ್ಟಿದ್ದು, ‘ಭರ್ಗೋ ದೇವಸ್ಯ ಧೀಮಹಿ’ ಯಜುರ್ವೇದಕ್ಕೆ ಸಂಬಂಧಪಟ್ಟಿದ್ದು, ‘ಧೀಯೊ ಯೊ ನಃ ಪ್ರಚೋದಯಾತ್’ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಹೀಗೆ ಮೂರು ವೇದಗಳ ಸಾರ ಗಾಯತ್ತ್ರಿಯ ಮೂರುಪಾದಗಳುಳ್ಳ ಒಂದು ಮಂತ್ರದಲ್ಲಿದೆ. ಇದಕ್ಕಾಗಿ ಗಾಯತ್ತ್ರಿ ಮಂತ್ರವನ್ನು ‘ವೇದಮಾತಾ’ ಎನ್ನುತ್ತಾರೆ. ಈ ಗಾಯತ್ತ್ರಿಯಿಂದ ರಸ ತೆಗೆದಾಗ ಮೂರು ಪಾದಗಳಿಂದ ಮೂರು ಪದಗಳುಳ್ಳ ವ್ಯಾಹೃತಿ: “ಭೂಃ ಭುವಃ ಸ್ವಃ”. ಈ ಮೂರು ಪದಗಳ ಸಾರ ಮೂರು ಅಕ್ಷರದ(ಅ, ಉ, ಮ) ಓಂಕಾರ-ॐ.

ಓಂಕಾರದಲ್ಲಿ ‘ಅ’ಕಾರ ಋಗ್ವೇದಕ್ಕೆ, ‘ಉ’ಕಾರ ಯಜುರ್ವೇದಕ್ಕೆ ಮತ್ತು ‘ಮ’ಕಾರ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಋಗ್ವೇದ " ಅಗ್ನಿಮೀ”ಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ” | ಹೋತಾ”ರಂ ರತ್ನ ಧಾತಮಂ |..." ಎಂದು ‘ಅ’ ಕಾರದಿಂದ ಪ್ರಾರಂಭವಾಗುತ್ತದೆ. ಮತ್ತು “....ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ಹಃ: | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ॥” ಎಂದು ‘ಇ’ಕಾರದಲ್ಲಿ ಕೊನೆಗೊಳ್ಳುತ್ತದೆ.

 ಅಲ್ಲಿಂದ ಮುಂದುವರಿದು ಯಜುರ್ವೇದ “ಇಷೇ ತ್ವೋರ್ಜೆ ತ್ವಾ …” ಎಂದು ‘ಇ’ಕಾರದಿಂದ ಪ್ರಾರಂಭವಾಗಿ “……..ಸಮುದ್ರೋ ಬಂಧುಃ” ಎಂದು ‘ಉ’ಕಾರದಲ್ಲಿ ಕೊನೆಗೊಳ್ಳುತ್ತದೆ. ಹೀಗೆ ಓಂಕಾರದಲ್ಲಿನ ‘ಅ’ಕಾರ ಮತ್ತು ‘ಉ’ಕಾರ ಋಗ್ವೇದ ಮತ್ತು ಯಜುರ್ವೇದವನ್ನು ಪೂರ್ಣವಾಗಿ ಸೂಚಿಸುವ ಸಂಕ್ಷೇಪಣಾ ರೂಪ. 

ಇಲ್ಲಿಂದ ಮುಂದೆ ಸಾಮವೇದ. ಸಾಮವೇದ “ಅಗ್ನ ಆ ಯಾಹಿ ………” ಎಂದು ‘ಅ’ಕಾರದಿಂದ ಆರಂಭವಾಗಿ “……ಬ್ರ್ಹಸ್ಪತಿರ್ದಧಾತು” ಎಂದು ‘ಉ’ಕಾರದಲ್ಲಿ ಕೊನೆಗೊಳ್ಳುತ್ತದೆ. ಆದ್ದರಿಂದ ಇಲ್ಲಿ ‘ಮ’ ಕಾರ ಬಂದಿಲ್ಲ. 

ಆದರೆ ನಮಗೆ ತಿಳಿದಂತೆ ಸಾಮವೇದ ನಾದ ರೂಪದಲ್ಲಿದೆ. ಓಂಕಾರದಲ್ಲಿ ಕೂಡಾ ‘ಮ’ ಎನ್ನುವುದು ನಾದರೂಪದಲ್ಲಿ ಹೊರ ಹೊಮ್ಮುವ ಅಕ್ಷರ- ಅದು ಸಂಗೀತ. 

ಹೀಗೆ ಓಂಕಾರ ವೇದದ ಸಂಕ್ಷೇಪಣಾರೂಪವಾದ ಬೀಜಾಕ್ಷರ. ಇದು ನಮಗೆ ವೇದವನ್ನು ಗುರುತಿಸುವ ಮಾರ್ಗದರ್ಶಿ. ಆದ್ದರಿಂದ ಇದು ಭಗವಂತನನ್ನು ಸ್ತೋತ್ರ ಮಾಡುವ ಮಂತ್ರಗಳಲ್ಲಿ ಅತ್ಯಂತ ಪ್ರಕೃಷ್ಟವಾದುದ್ದು. ಇದಕ್ಕಿಂತ ದೊಡ್ಡ ಸ್ತೋತ್ರಮಾಡುವ ಶಬ್ದ ಈ ಪ್ರಪಂಚದಲ್ಲಿಲ್ಲ.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ತುಳಸಿ ವಿವಾಹ

ತುಳಸಿ ವಿವಾಹ:

ಪೂಜೆ ವಿಧಾನ ಮತ್ತು ಮಹತ್ವ 
ದೀಪಾವಳಿ ಹಬ್ಬ ಮುಗಿದ ಬಳಿಕ ಹಿಂದೂಗಳು ಒಂದು ತಿಂಗಳು ಕಾರ್ತಿಕ ಮಾಸವನ್ನು ಆಚರಿಸುತ್ತಾರೆ. ಈ ಕಾರ್ತಿಕ ಮಾಸ ಶಿವನಿಗೆ ಮುಡುಪಾಗಿರುವ ಮಾಸ. ಕಾರ್ತಿಕ ಮಾಸದ ಶುದ್ಧ ದ್ವಾದಶಿಯಂದು ಆಚರಿಸುವ ಹಬ್ಬವೇ ತುಳಸಿ ವಿವಾಹ. ಇದನ್ನು ಉತ್ಥಾನ ದ್ವಾದಶಿ ಎಂತಲೂ ಕರೆಯುವರು. ಉತ್ಥಾನ ಎಂದರೆ ಏಳುವುದು ಎಂದರ್ಥ. ಅಂದರೆ ಶ್ರೀಮನ್ನಾರಾಯಣನು ಪಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಮೇಲೆದ್ದು ತನ್ನ ನಿದ್ರಾಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ದಿನ.ಈ ದಿನ ಸಂಜೆಯ ಸಮಯದಲ್ಲಿ ತುಳಸಿ ವಿವಾಹ ಏರ್ಪಡುವುದು. ಚಾಂದ್ರಮಾನ ಕಾರ್ತಿಕಮಾಸದ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ವಿಷ್ಣು ಸ್ವರೂಪಿ ನೆಲ್ಲಿಕಾಯಿ ಗಿಡದೊಂದಿಗೆ ತುಳಸಿಯ ವಿವಾಹವನ್ನು ಶ್ರದ್ಧಾ ಭಕ್ತಿಯಿಂದ ಮಾಡಿ ಹಬ್ಬವನ್ನು ಆಚರಿಸಲಾಗುವುದು. 

ತುಳಸಿ ವಿವಾಹ ಆಚರಣೆಯ ಹಿಂದಿರುವ ಪೌರಾಣಿಕ ಕಥೆ ಈ ಆಚರಣೆಯ ಹಿಂದೆ ಒಂದು ಸುಂದರವಾದ ಕಥೆಯಿದೆ. ಹಿಂದೂ ಪುರಾಣದ ಪ್ರಕಾರ ವೃಂದಾ ಎಂಬ ಹೆಸರಿನ ಯುವತಿಯೇ ತುಳಸಿಗಿಡವಾಗಿ ಪರಿವರ್ತನೆಯಾಗಿರುತ್ತಾಳೆ. ಈಕೆ ಜಲಂಧರನೆಂಬ ಲೋಕಕಂಟಕ ರಾಜನ ಪತ್ನಿಯಾಗಿರುತ್ತಾಳೆ. ಆಕೆಗೆ ಮಹಾವಿಷ್ಣುವಿನ ಪರಮ ಭಕ್ತೆ. ಈಕೆಯ ಪಾತಿವ್ರತ್ಯದ ಫಲವಾಗಿ ಯಾರೂ ಸೋಲಿಸಲು ಸಾಧ್ಯವಾಗದ ಮಟ್ಟಕ್ಕೆ ಬೆಳೆಯುತ್ತಾನೆ. ತನ್ನ ಯಾರೂ ಸೋಲಿಸಲಾರರು ಎಂಬ ಅಹಂನಿಂದ ದೇವತೆಗಳಿಗೆ ಉಪಟಳ ಕೊಡಲು ಪ್ರಾರಂಭಿಸುತ್ತಾನೆ. ಈತನ ಉಪಟಳ ಎಲ್ಲೆ ಮೀರಿದಾಗ ದೇವತೆಗಳು ಶಿವನ ಮೊರೆ ಹೋಗುತ್ತಾರೆ, ಆಗ ಶಿವನು ವಿಷ್ಣುವಿನ ಬಳಿ ಹೋಗಿ ಸಮಸ್ಯೆಯನ್ನು ನೀಗಿಸುವಂತೆ ಹೇಳುತ್ತಾನೆ. ಆಗ ವಿಷ್ಣುವು ಜಲಂಧರನ ರೂಪ ತಾಳಿ ವೃಂದಾಳ ಬಳಿಗೆ ಬಂದು ಮೋಹಿಸಿ ಆಕೆಯ ಪಾವಿತ್ರ್ಯತೆಗೆ ಧಕ್ಕೆ ತರುತ್ತಾನೆ. ಈ ಸಂದರ್ಭದಲ್ಲಿ ಶಿವನು ಜಲಂಧರ ರಾಜನನ್ನು ಸಂಹರಿಸುತ್ತಾನೆ. ಇತ್ತ ತನ್ನ ಚಾರಿತ್ರ್ಯಕ್ಕೆ ಧಕ್ಕೆ ಅಗಿದ್ದು ಗೊತ್ತಾಗಿ ವೃಂಧಾ ವಿಷ್ಣುವಿಗೆ ಕಪ್ಪು ಕಲ್ಲಾಗಿ ಹೋಗು ಹಾಗೂ ನಿನಗೆ ಪತ್ನಿಯ ವಿರಹವುಂಟಾಗಲಿ ಎಂದು ಶಾಪ ನೀಡಿ ತನ್ನ ಪತಿಯ ಚಿತೆಗೆ ಹಾರಿ ದೇಹ ತ್ಯಾಗ ಮಾಡುತ್ತಾಳೆ. ವಿಷ್ಣುವು ಆಕೆಯ ಆತ್ಮವನ್ನು ತುಳಸಿ ಗಿಡವಾಗಿ ಪರಿವರ್ತಿಸಿ ಮುಂದಿನ ಜನ್ಮದಲ್ಲಿ ಸಾಲಿಗ್ರಾಮವಾಗಿ ಪ್ರಭೋದಿನಿ ಏಕಾದಶಿಯ ದಿನ ತುಳಸಿಯನ್ನು ಮದುವೆಯಾಗುತ್ತಾನೆ ಎಂಬ ಕಥೆಯಿದೆ. ಇದರ ಸಂಕೇತವೇ ವಿಷ್ಣು-ತುಳಸಿ ವಿವಾಹ. 
ಇನ್ನೊಂದು ಪುರಾಣದ ಪ್ರಕಾರ ದೇವತೆಗಳು ಹಾಗೂ ದಾನವರ ನಡುವೆ ಸಮುದ್ರ ಮಂಥನ ನಡೆದಾಗ ಕೊನೆಯಲ್ಲಿ ಅಮೃತ ಬಂತು. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ಅದಕ್ಕೆ ತುಳಸಿಯೆಂದು ಹೆಸರಿಟ್ಟು ಲಕ್ಷ್ಮಿಯೊಂದಿಗೆ ತುಳಸಿಯನ್ನು ಕೂಡ ತನ್ನ ಪತ್ನಿಯಾಗಿಸುತ್ತಾನೆ ಎಂಬ ಕತೆಯಿದೆ. ಹಿಂದೂಗಳಲ್ಲಿ ತುಳಸಿ ಹಬ್ಬ ಮುಗಿದ ಬಳಿಕ ಮದುವೆ ಸಿದ್ಧತೆಗಳನ್ನು ಪ್ರಾರಂಭಿಸುತ್ತಾರೆ. 
ತುಳಸಿ ಹಬ್ಬ ಆಚರಣೆಯ ಮಹತ್ವ :::ಮುತ್ತೈದೆಯರು ತುಳಸಿ ಹಬ್ಬ ಆಚರಣೆ ಮಾಡುವುದರಿಂದ ತನ್ನ ಗಂಡನ ಆರೋಗ್ಯ, ಅಯುಸ್ಸು ಹೆಚ್ಚಾಗುವುದು ಎಂದು ಹೆಳಲಾಗುವುದು. ಕಾರ್ತಿಕ ಮಾಸದಲ್ಲಿ ನೆಲ್ಲಿಕಾಯಿ ಗಿಡದಲ್ಲಿ ವಿಷ್ಣು ನೆಲಿಸಿರುತ್ತಾನೆ ಎಂಬ ನಂಬಿಕೆ ಇದೆ, ಆದ್ದರಿಂದ ಉತ್ಥಾನ ದ್ವಾದಶಿ ದಿನ ನೆಲ್ಲಿಕಾಯಿ ಗಿಡ ಹಾಗೂ ತುಳಸಿ ಗಿಡಕ್ಕೆ ಪೂಜೆ ಮಾಡಿ ವಿವಾಹ ಆಚರಣೆ ಮಾಡುತ್ತಾರೆ. ಈ ಆಚರಣೆಯಿಂದಾಗಿ ಪತಿಗೆ ಒಳಿತಾಗುವುದು ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ.
ತುಳಸಿ ವಿವಾಹ ಮಾಡುವುದು ಹೇಗೆ? ಹಿಂದೂಗಳ ಮನೆ ಮುಂದೆ ತುಳಸಿ ಗಿಡವಿದ್ದೇ ಇರುತ್ತದೆ. ಉತ್ಥಾನ ದ್ವಾದಶಿಯಂದು ತುಳಸಿ ಕಟ್ಟೆಯನ್ನು ತೊಳೆದು ಅದಕ್ಕೆ ರಂಗೋಲಿ, ಹೂವು, ಮಾವಿನ ಎಲೆಗಳಿಂದ ಅಲಂಕರಿಸಿ ವಿಷ್ಣುವಿನ ಅವತಾರ ಕೃಷ್ಣನ ಮೂರ್ತಿಯನ್ನಿರಿಸಿ ಪೂಜಿಸಲಾಗುತ್ತದೆ. ದೀಪಾವಳಿ ಸಮಯದಲ್ಲಿ ಇದ್ದಷ್ಟೇ ಸಂಭ್ರಮ ಈ ತುಳಸಿ ವಿವಾಹ ಆಚರಣೆಯಲ್ಲೂ ಇರುತ್ತದೆ. ಹೆಂಗಳೆಯರು ತುಳಸಿ ಗಿಡವನ್ನು ಮದುವಣಗಿತ್ತಿಯಂತೆ ಸಿಂಗರಿಸುತ್ತಾರೆ. ವಿಷ್ಣುವಿನ ಅಥವಾ ಅವನ ಅವತಾರವಾದ ಕೃಷ್ಣ, ರಾಮನ ಫೋಟೋವನ್ನು ಇಲ್ಲವೇ ಸಾಲಿಗ್ರಾಮ ಕಲ್ಲು, ಇಲ್ಲವೇ ನೆಲ್ಲಿಕಾಯಿ ಗಿಡವನ್ನು ತುಳಸಿ ಗಿಡದ ಪಕ್ಕ ಇಟ್ಟು ಇಬ್ಬರನ್ನೂ ಸ್ನಾನ ಮಾಡಿಸಿ ಶುಭ್ರ ಬಟ್ಟೆ ತೊಡಿಸಿ ಹೂವು, ಹಣ್ಣುಗಳಿಂದ ಅಲಂಕರಿಸುತ್ತಾರೆ. ವಿಷ್ಣುವಿನ ಭಾವಚಿತ್ರ ಹಾಗೂ ತುಳಸಿ ಗಿಡಕ್ಕೆ ಹತ್ತಿಯಿಂದ ತಯಾರಿಸಿದ ಮಾಲೆಯನ್ನು ತೊಡಿಸಿ ಮದುವೆಯ ಶಾಸ್ತ್ರ ಮಾಡಲಾಗುತ್ತದೆ. ಹಿಂದೂ ವಿವಾಹ ಪದ್ಧತಿಯಲ್ಲಿ ನಡೆಯುವ ಆಚರಣೆಯಂತೆಯೇ ವಿಷ್ಣು-ತುಳಸಿ ವಿವಾಹವನ್ನು ಭಕ್ತರು ಆಚರಿಸುತ್ತಾರೆ.
ತುಳಸಿ ವಿವಾಹ ಆಚರಣೆಯ ಮಹತ್ವ :::ತುಳಸಿ ವಿವಾಹ ಆಚರಣೆ ಮಾಡುವವರು ಉಪವಾಸವಿದ್ದು ಈ ಆಚರಣೆ ಮಾಡುತ್ತಾರೆ. ತುಳಸಿ ಗಿಡದ ಸುತ್ತ ಮದುವೆ ಮಂಟಪ ನಿರ್ಮಿಸಿ ಅದಕ್ಕೆ ಅಲಂಕರಿಸಿರುತ್ತಾರೆ, ಈ ಮಂಟಪಕ್ಕೆ ಬೃಂದಾವನವೆಂದು ಹೆಸರು. ಈ ಮಂಟಪದಲ್ಲಿ ವೃಂದಾಳ ಆತ್ಮವಿದ್ದು ಮರುದಿನ ಬೆಳಗ್ಗೆ ಹೊರಟು ಹೋಗುತ್ತದೆ ಎಂಬ ನಂಬಿಕೆಯಿದೆ. ತುಳಸಿ ವಿವಾಹ ನೋಡಲು ಬಂದವರು ತುಳಸಿ ಹಾಗೂ ವಿಷ್ಣು ಫೋಟೋ ಅಥವಾ ನೆಲ್ಲಿಕಾಯಿ ಗಿಡವನ್ನು ಅಲಂಕಾರ ಮಾಡಿ ಪೂಜಿಸಿದ ಮಹಿಳೆಯರಿಗೆ ಉಡುಗೊರೆಗಳನ್ನು ನಿಡುವವರು. ತುಳಸಿ ವಿವಾಹದಂದು ಹಬ್ಬದ ಅಡುಗೆಯನ್ನು ಮಾಡಿ ಈ ಹಬ್ಬವನ್ನು ಆಚರಿಸಲಾಗುವುದು. ಹಿಂದೂಗಳು ಈ ಹಬ್ಬ ಅಚರಣೆಯ ಬಳಿಕ ಮದುವೆ ಹಾಗೂ ಗೃಹ ಪ್ರವೇಶವನ್ನು ಮಾಡುತ್ತಾರೆ.

ಕಾರ್ತಿಕ ಮಾಸದಲ್ಲಿ ತುಪ್ಪದ ದೀಪ

ಕಾರ್ತಿಕ ಮಾಸದಲ್ಲಿ ತುಪ್ಪದ ದೀಪ ಅರ್ಪಿಸುವ ವೈಭವ
ಸ್ಕಂದ ಪುರಾಣ 
ಶ್ರೀ ಬ್ರಹ್ಮ-ನಾರದಮನಿಗಳ ಸಂವಾದ
1) ಕಾರ್ತಿಕ ಮಾಸದಲ್ಲಿ ಶ್ರೀ ದಾಮೋದರನೀಗೆ ತುಪ್ಪದ ದೀಪ ಅರ್ಪಿಸುವುದರಿಂದ ಸಾವಿರಾರು ಜನ್ಮಗಳ ಪಾಪಗಳು ತೊಡೆದುಹೋಗುತ್ತವೆ.
2)ಯಾವುದೇ ಮಂತ್ರ ಪಠಿಸದಿರಬಹುದು, ಪುಣ್ಯ ಕಾರ್ಯ ಮಾಡದಿರಬಹುದು, ಮತ್ತು ಪರಿಶುದ್ಧತೆ ಆಚರಿಸದಿರಬಹುದು, ಕಾರ್ತಿಕ ಮಾಸದಲ್ಲಿ ಶ್ರೀ ದಾಮೋದರನಿಗೆ ತುಪ್ಪದ ದೀಪ ಬೆಳಗಿದರೆ ಎಲ್ಲವೂ ಪರಿಪೂರ್ಣತೆ ಹೊಂದುತ್ತದೆ. 
3)ಕಾರ್ತಿಕ ಮಾಸದಲ್ಲಿ ಕೇಶವನಿಗೆ ತುಪ್ಪದ ದೀಪ ಹಚ್ಚುವುದು ಯಜ್ಞಗಳ ಆಚರಣೆ ಮತ್ತು ಎಲ್ಲಾ ನದಿಗಳಲ್ಲಿ ಪವಿತ್ರ ಸ್ನಾನ ಮಾಡುವುದಕ್ಕೆ ಸಮ.
4) ಕಾರ್ತಿಕ ಮಾಸದಲ್ಲಿ ಯಾರಾದರೂ ಶ್ರೀ ಕೇಶವನಿಗೆ ತುಪ್ಪದ ದೀಪ ಅರ್ಪಿಸಿ ಸಂತೃಪ್ತಗೊಳಿದರೆ ಅವರ ಕುಟುಂಬದ ಪೂರ್ವಜರು ಮುಕ್ತಿ ಪಡೆಯುವರು.
5) ಈ ಕಾರ್ತಿಕ ಮಾಸದಲ್ಲಿ ದಾಮೋದರನಿಗೆ ಅಂದರೆ ಕೃಷ್ಣನಿಗೆ ತುಪ್ಪದ ದೀಪ ಅರ್ಪಿಸುವುದರಿಂದ ಅವರು ವೈಭವಹೊಂದಿ ಅದೃಷ್ಟವಂತರಾಗುವರು.
6) ಯಾರು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ತುಪ್ಪದ ದೀಪ ಅರ್ಪಿಸಿದರೆ, ಶ್ರೀ ವಾಸುದೇವನು ಅವರಿಗೆ ಒಳ್ಳೆಯ ಫಲಿತಾಂಶ ನೀಡುವನು.
7) ಕಾರ್ತಿಕ ಮಾಸದಲ್ಲಿ ಶ್ರೀ ದಾಮೋದರನಿಗೆ ತುಪ್ಪದ ದೀಪ ಅರ್ಪಿಸುವುದರಿಂದ ಪರಿಹಾರವಾಗದಂತಹ ಪಾಪಗಳು ಮೂರು ಲೋಕಗಳಲ್ಲಿಯೂ ಇಲ್ಲ. 
8) ಈ ಕಾರ್ತಿಕ ಮಾಸದಲ್ಲಿ ಶ್ರೀ ದಾಮೋದರನಿಗೆ ತುಪ್ಪದ ದೀಪ ಅರ್ಪಿಸುವುದರಿಂದ ವ್ಯಕ್ತಿಯು ಯಾವುದೇ ಸಂಕಷ್ಟಗಳಿಲ್ಲದೇ ಶಾಶ್ವತವಾದ ಆಧ್ಯಾತ್ಮಿಕ ಜಗತ್ತನ್ನು ಹೊಂದುವನು.
ಹಿಂದೂಗಳಿಗೆ ಕಾರ್ತಿಕ ಮಾಸ ಮಹತ್ವವಾದದ್ದು 
ಹಾಗೂ ಅಧ್ಯಾತ್ಮ ಸಾಧಕರ ಮಾಸ
ಕಾರ್ತಿಕ ಮಾಸ ಹಬ್ಬಗಳ ಪರ್ವವಷ್ಟೇ ಅಲ್ಲ, ಜ್ಯೋತಿ ಬೆಳಗುವ, ಮನದಲ್ಲಿರುವ ಅಂಧಕಾರವನ್ನು ದೂರ ಮಾಡುವ ಪರ್ವವೂ ಆಗಿದೆ. ಅದರ ಸಂಕೇತವಾಗಿ ಮನೆಯ ಮುಂದೆ ದೀಪ ಬೆಳಗುತ್ತಾರೆ. 
ಕಾರ್ತಿಕ ಮಾಸವು ದೀಪಾವಳಿಯ ನಂತರ ಶುರುವಾಗುತ್ತದೆ. ಕಾರ್ತಿಕ ಪೌರ್ಣಮಿಯಂದು ಚಂದ್ರನ ಬೆಳಕು ಎಂದಿಗಿಂತಲೂ ಪ್ರಕಾಶಮಾನವಾಗಿರುತ್ತದೆ. ಕಾರಣ, ಚಂದ್ರನು ಭೂಮಿಯ ಸಮೀಪದಲ್ಲಿರುತ್ತಾನೆ. ಹಾಗಾಗಿ ಎಂದಿಗಿಂತಲೂ ಶೇ. 7ರಷ್ಟು ಹೆಚ್ಚು ಸೂರ್ಯನ ಬೆಳಕನ್ನು ಚಂದ್ರನು ಪ್ರತಿಫಲಿಸುತ್ತಾನೆ.
ಕಾರ್ತಿಕ ಮಾಸದ ವಿಶೇಷ
ಸೂರ್ಯನು ದ್ವಾದಶ ರಾಶಿಗಳಲ್ಲಿ ಸಂಚರಿಸುತ್ತಾನೆ. ಪ್ರತಿಯೊಂದು ರಾಶಿಯಲ್ಲಿ ಸಂಚರಿಸುವಾಗ ತನ್ನದೇ ಆದ ಪ್ರಭಾವವನ್ನು ಪ್ರತ್ಯೇಕವಾಗಿ ಬೀರುತ್ತಾನೆ. ಅದರ ಪ್ರಭಾವವು ಭೂಮಿಯ, ಭೂಮಿಯ ಪರಿಸರ ಹಾಗೂ ವ್ಯಕ್ತಿಯ ಮೇಲಾಗುತ್ತದೆ. ಕಾರ್ತಿಕ ಮಾಸವು ಮನುಷ್ಯ ಮತ್ತು ದೇವರ ನಡುವಿನ ಸೂಕ್ಷ್ಮ ಪ್ರಜ್ಞೆಯ ಸೇತುವಾಗಿದೆ.
ಇಂತಹ ಸಾಧನೆಯ ಮಾರ್ಗದತ್ತ ಸಾಗಲು ನಮ್ಮ ಋಷಿ ಮುನಿಗಳು ಕೆಲವೊಂದು ಧಾರ್ಮಿಕ ವಿಧಿ, ವಿಧಾನಗಳನ್ನು ಉಲ್ಲೇಖಿಸಿದ್ದಾರೆ. ಅಂತಹ ಋಷಿ ಮುನಿಗಳಲ್ಲಿ ವಸಿಷ್ಠ ಋಷಿಗಳು ಕೆಲವೊಂದು ವಿಧಾನಗಳನ್ನು ಸೂಚಿಸಿದ್ದಾರೆ. ಅದನ್ನು ಅನುಸರಿಸುವ ಮೂಲಕ ನಮ್ಮ ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ಕಂಡುಕೊಳ್ಳಬಹುದು.
ಹೀಗೆ ವಸಿಷ್ಠರಿಂದ ವಿಧಿತವಾದ ಐದು ವಿಧಾನಗಳೆಂದರೆ,
. ಪವಿತ್ರ ಸ್ನಾನ 
ಕಾರ್ತಿಕ ಮಾಸದಲ್ಲಿ ಪ್ರತಿನಿತ್ಯ ಮೂರು ಬಾರಿ ಸ್ನಾನ ಮಾಡುವ ಸಂಪ್ರದಾಯ ಕೆಲವರಲ್ಲಿದೆ. ಸ್ನಾನ ಮಾಡುವುದರಿಂದ, ಭೌತಿಕವಾಗಿ ದೇಹದ ಕಲ್ಮಷಗಳನ್ನು ತೊಳೆದುಕೊಳ್ಳಬಹುದು. ಅದರೊಂದಿಗೆ ಮನಸ್ಸಿನ ಕಲ್ಮಷಗಳನ್ನು ಕಳೆದುಕೊಳ್ಳುವುದರೊಂದಿಗೆ, ನಮ್ಮ ಭಾವನೆಗಳನ್ನು , ಮನಸ್ಸಿನ ಕೋಪ, ತಾಪವನ್ನು ನಿಯಂತ್ರಿಸಿಕೊಳ್ಳಬಹುದು. ನದಿ ತೀರಗಳಲ್ಲಿ ಮಾಡುವ ಜಲ ಸ್ನಾನವು ಜಲ ಚಿಕಿತ್ಸೆಗೆ ಪೂರಕವಾಗಿದೆ. ಪವಿತ್ರ ಸ್ನಾನ ಮಾಡುವುದರಿಂದ ದೇಹ ಹಾಗೂ ಮನಸು ಎರಡು ಶುದ್ಧವಾಗುತ್ತದೆ.
2. ದೀಪಾರಾಧನೆ 
ಪವಿತ್ರ ಸ್ನಾನಾನಂತರ, ದೀಪಗಳನ್ನು ಮನೆಯ ಅಂಗಳದಲ್ಲಿ ಮತ್ತು ಮನೆಯ ಸುತ್ತಮುತ್ತ ಬೆಳಗಬೇಕೆಂಬ ನಿಯಮವಿದೆ. ಶಿವ ಮತ್ತು ವಿಷ್ಣು ಮಂದಿರಗಳಲ್ಲಿ ಸೂರ್ಯೋದಯಕ್ಕೆ ಮುನ್ನ ಮತ್ತು ಸೂರ್ಯೋದಯಕ್ಕೆ ನಂತರ ಭಗವಂತನ ಪ್ರೀತ್ಯರ್ಥವಾಗಿ ಜ್ಯೋತಿಯನ್ನು ಬೆಳಗುತ್ತಾರೆ. ತುಪ್ಪದ ದೀಪವನ್ನು ಬೆಳಗುವುದರಿಂದ ಅಸುರೀ ಶಕ್ತಿಗಳು ನಾಶವಾಗುತ್ತವೆ, ಕ್ರಿಮಿ, ಕೀಟಗಳಿಂದ ಪರಿಸರ ಶುದ್ಧವಾಗುತ್ತವೆ. ಅದರೊಂದಿಗೆ ಮನಸ್ಸಿನ ಅಜ್ಞಾನವು ಕಳೆಯುತ್ತದೆ. ಹೀಗೆ ಮನೆಯಲ್ಲಿ ದೀಪ ಬೆಳಗುವುದರಿಂದ. ಐಶ್ವರ್ಯ, ಸಂಪತ್ತು, ಆರೋಗ್ಯ ಸ್ಥಿರವಾಗುತ್ತದೆ.
3. ಪವಿತ್ರ ಗಿಡದ ಪೂಜೆ 
ದೀಪವನ್ನು ಬೆಳಗಿ ಮನದೊಳಗಿನ ಅಜ್ಞಾನವನ್ನು ಕಳೆದುಕೊಂಡ ನಂತರ ತುಳಸಿ ದೇವಿಯ ಪೂಜೆಗೆ ಮುಂದಾಗುತ್ತೇವೆ. ತುಳಸಿ ಒಂದು ಗಿಡಮೂಲಿಕಾ ಸಸ್ಯವಷ್ಟೇ ಅಲ್ಲ, ವಾತಾವರಣದಲ್ಲಿ ಆಮ್ಲಜನಕವನ್ನು ಹೆಚ್ಚಿಸುವ ಶಕ್ತಿಯಾಗಿದೆ. ತುಳಸಿ ಪೂಜೆಯನ್ನು ಪ್ರತಿನಿತ್ಯ ಮಾಡುವ ಮಹಿಳೆಯರಿಗೆ ಸೌಭಾಗ್ಯ ಸಿದ್ಧಿಸುತ್ತದೆರ ಎನ್ನಲಾಗಿದೆ. ತುಳಸಿ ಗಿಡದ ಮುಂದೆ ದೀಪಾರಾಧನೆ ಮಾಡುವುದು ತ್ಯಾಗದ ಸಂಕೇತವಾಗಿದೆ.
4. ದಾಮೋದರನ ಪೂಜೆ 
ಶಿವ ಮತ್ತು ವಿಷ್ಣುವಿನ ಆರಾಧನೆಯೊಂದಿಗೆ ಶಿವ ಮತ್ತು ವಿಷ್ಣು ಎರಡೂ ಒಂದೇ ಎನ್ನುವ ಭಾವ ಮೂಡುತ್ತದೆ. ಶಿವ ಪ್ರಜ್ಞೆಯ ಸಂಕೇತವಾದರೆ, ವಿಷ್ಣುವು ಸ್ಥಿತಿಕಾರನಾಗಿದ್ದಾನೆ. ಹೇಗೆ ಬ್ರಹ್ಮಾಂಡವು ಸ್ಥಿತಿ ಮತ್ತು ಪ್ರಜ್ಞೆಯಿಂದ ಆವೃತ್ತವಾಗಿದೆಯೋ ಹಾಗೆಯೇ ಶಿವ ಮತ್ತು ವಿಷ್ಣುವಿನ ಪ್ರಜ್ಞೆಯು ನಮ್ಮಲ್ಲಿ ಅಡಕವಾಗಿದೆ. ಇಂತಹ ಪ್ರಜ್ಞೆಯೇ ನಮ್ಮನ್ನು ಅಧ್ಯಾತ್ಮ ಸಾಧನೆಯತ್ತ ಮುನ್ನಡೆಸುತ್ತದೆ.
5. ಸೋಮವಾರ ವಿಶೇಷ 
ಸೋಮವಾರ ಶಿವನಿಗೆ ಪ್ರಿಯವಾದ ವಾರ. ಸೋಮವಾರದ ಅಧಿಪತಿ ಚಂದ್ರ. ಚಂದ್ರ ಮನೋಕಾರಕ ಅಂದರೆ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸುವವ. ಯಾರು ತಮ್ಮ ಮನಸ್ಸನನ್ನು ನಿಗ್ರಹದಲ್ಲಿ ಇಟ್ಟುಕೊಳ್ಳುತ್ತಾರೋ ಅಂತಹ ವ್ಯಕ್ತಿಗಳು ಉನ್ನತ ಸ್ಥಾನಕ್ಕೆ ಏರುತ್ತಾರೆ. ಅದರೊಂದಿಗೆ ತಮ್ಮ ವ್ಯಕ್ತಿತ್ವ ಬೆಳವಣಿಗೆಗೂ ಪೂರಕವಾಗುತ್ತಾರೆ. ಸಿದ್ಧಿಯನ್ನು ಪಡೆಯುತ್ತಾರೆ. ಹಾಗಾಗಿ ಯಾರು ಸೋಮವಾರದಂದು ಪ್ರದೋಷ ವ್ರತವನ್ನು ಆಚರಿಸುತ್ತಾರೋ, ಮನೋಕಾರಕ ಚಂದ್ರನನ್ನೇ ತನ್ನ ಶಿರದಲ್ಲಿ ಧಾರಣೆ ಮಾಡಿಕೊಂಡಿರುವ ಶಿವನನ್ನು ಕುರಿತು ಧ್ಯಾನ ಮಾಡುತ್ತಾರೋ, ಅವರು ಅತ್ಯುತ್ತ ಮ ಜ್ಞಾನವಂತರಾಗುತ್ತಾರೆ.
-----

ಕಾರ್ತಿಕ ಮಾಸದಲ್ಲಿ ಹುಟ್ಟಿದವರಿಗೆ ವಿಷ್ಣು, ಶಿವನ ಅನುಗ್ರಹ ಇರುತ್ತದೆ. ಈ ಸಂಬಂಧ ದೇವತಾ ಆರಾಧನೆ ಮಾಡಿದರೆ ರಾಜಯೋಗ ಲಭಿಸುತ್ತದೆ. ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ಮೃತ್ಯುಂಜಯ ಆರಾಧನೆ ಮಾಡಿದರೆ ಒಳ್ಳೆಯದು.

ದೇವರು ನೈವೇದ್ಯ ತಿಂತಾನಾ?

*ದೇವರು ನೈವೇದ್ಯ ತಿಂತಾನಾ?*

*ಒಂದು ಅದ್ಭುತ ವಿಚಾರದ ವಿಶ್ಲೇಷಣೆಯ ಸಂವಾದ ಈ ಕೆಳಗಿದೆ.* 

ನೈವೇದ್ಯ :  ಆ ದೇವರು ನಾವಿಟ್ಟ ನೈವೇದ್ಯವನ್ನು ತಿನ್ನುವನೇನು? 

ಇದು ನಂಬಿಕೆಯಿಲ್ಲದವರ ಪ್ರಶ್ನೆ.  ಇದಕ್ಕೆ ಉತ್ತರವೆನ್ನುವಂತೆ ಓದು ಸೂಕ್ತ ವಿವರಣೆ ನೀಡುವ ಒಂದು ಪ್ರಾಮಾಣಿಕ ಪ್ರಯತ್ನ. 

ಒಬ್ಬ ಗುರು ಮತ್ತು  ಶಿಷ್ಯರ ಸಂವಾದ ಹೀಗೆ ನಡೆದಿತ್ತು. 
  
ದೇವರನ್ನು ನಂಬದ ಶಿಷ್ಯನೊಬ್ಬ ತನ್ನ ಗುರುವನ್ನು " ದೇವರು ನಾವು ಮಾಡುವ ನೈವೇದ್ಯವನ್ನು ಸ್ವೀಕರಿಸುವನೇ? ಹಾಗೆ ನಾವು ನೀಡುವ ನೈವೇದ್ಯವನ್ನು ಸ್ವೀಕರಿಸಿದರೆ ನಾವು 'ಪ್ರಸಾದ' ವಿನಿಯೋಗ ಮಾಡುವುದು ಹೇಗೆ? ಆ ದೇವರು ನಾವು ನೀಡುವ ನೈವೇದ್ಯವನ್ನು ನಿಜವಾಗಿಯೂ ಸ್ವೀಕರಿಸುವನೇ ಗುರುಗಳೇ?" ಎಂದು ಪ್ರಶ್ನಿಸಿದ. 
 
ಗುರುಗಳು ಯಾವ ಉತ್ತರವನ್ನೂ ನೀಡದೆ ಆ ಶಿಷ್ಯನಿಗೆ ತರಗತಿಗೆ  ತಯಾರಾಗಲು ಆದೇಶಿಸಿದರು.  

ಆ ದಿನ ಗುರುಗಳು 'ಉಪನಿಷತ್ತು' ಗಳ ಪಾಠವನ್ನು ಆರಂಭಿಸಿದರು. ಶಿಷ್ಯರಿಗೆ ' ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ ...... ಎಂಬ ಮಂತ್ರದ ಬೋಧನೆಯನ್ನು ಮಾಡಿ, ಸೃಷ್ಟಿಯ ಎಲ್ಲವೂ ಪೂರ್ಣದಿಂದಲೇ ಆಗಿರುತ್ತದೆ, ಪೂರ್ಣಕ್ಕೆ ಪೂರ್ಣವನ್ನು ಸೇರಿಸಿದರೆ ಅಥವಾ ಪೂರ್ಣದಿಂದ ಪೂರ್ಣವನ್ನು ಕಳೆದರೆ ಪೂರ್ಣವೇ ಉಳಿಯುತ್ತದೆ, ಎಂದು ವಿವರಿಸಿದರು.   

ನಂತರ ಎಲ್ಲರಿಗೂ ಈಶಾವಾಸ್ಯೋಪನಿಷತ್ತಿನ ಮಂತ್ರಗಳನ್ನು ಕಂಠಸ್ಥ ಮಾಡಿಕೊಳ್ಳಲು ಆದೇಶಿಸಿದರು. ಎಲ್ಲಾ ವಿದ್ಯಾರ್ಥಿಗಳೂ ಅಭ್ಯಾಸದಲ್ಲಿ ತೊಡಗಿದರು. ಹೀಗೆ ಎರಡು ಮೂರುದಿನಗಳ ಸತತ ಅಭ್ಯಾಸದ ನಂತರ, ಗುರುಗಳು, ಆ ನೈವೇದ್ಯದ ವಿಚಾರವಾಗಿ ತನ್ನ ಸಂದೇಹವನ್ನು ವ್ಯಕ್ತಪಡಿಸಿದ ಶಿಷ್ಯನನ್ನು ಕರೆದು, ಅಭ್ಯಾಸಮಾಡಿದ ಮಂತ್ರಗಳನ್ನು ಪುಸ್ತಕವನ್ನು ನೋಡದೆ ಹೇಳಲು, ಹೇಳಿದರು. ಆ ಶಿಷ್ಯ  ಕಂಠಸ್ಥ ಹೇಳಿ, ಒಪ್ಪಿಸಿದ.  
 
ಆಗ, ಗುರುಗಳು ಮುಗುಳುನಗುತ್ತಾ ' ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಬಾಯಿಪಾಠ ಮಾಡಿದೆಯಾ?" ಎಂದು ಪ್ರಶ್ನಿಸಿದರು. ' ಹೌದು ಗುರುಗಳೇ  ನಾನು ಆ ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಆ ಮಂತ್ರಗಳ ಉಚ್ಛಾರಣೆ ಮಾಡಿದೆ, ಗುರುಗಳೇ' ಎಂದು ಉತ್ತರಿಸಿದ. 
 
" ನೀನು ಆ ಪುಸ್ತಕದಲ್ಲಿನ ಎಲ್ಲಾ ಪದಗಳನ್ನೂ ನಿನ್ನ ಮನಸ್ಸಿಗೆ ತೆಗೆದುಕೊಂಡಿದ್ದೀಯೆ ಎಂದಮೇಲೆ ಆ ಪುಸ್ತಕದಲ್ಲಿ ಆ ಪದಗಳು ಇನ್ನೂ ಅಲ್ಲೇ ಇವೆಯಲ್ಲ?" ಎಂದು ಗುರುಗಳು ಕೇಳಿದರು. ಶಿಷ್ಯ ಪಿಳಿಪಿಳಿ ಕಣ್ಣುಬಿಡುತ್ತಾ ನಿಂತ. ಗುರುಗಳು  " ನಿನ್ನ ಮನಸ್ಸಿನಲ್ಲಿರುವ ಪದಗಳು ' ಸೂಕ್ಷ್ಮ ಸ್ಥಿತಿಯಲ್ಲಿವೆ' ಮತ್ತು ಪುಸ್ತಕದಲ್ಲಿನ ಪದಗಳು 'ಸ್ಥೂಲಸ್ಥಿತಿ' ಯಲ್ಲಿವೆ " ಎಂದರು.  

ಹಾಗೆಯೇ ಆ ದೇವರೂ ಸಹ ' ಸೂಕ್ಷ್ಮ ಸ್ಥಿತಿ' ಯಲ್ಲಿದ್ದಾನೆ. ನಮ್ಮ ಕಣ್ಣಿಗೆ ಕಾಣುವುದಿಲ್ಲ. ನಾವು ಅವನಿಗೆ ಮಾಡುವ ನೈವೇದ್ಯ 'ಸ್ಥೂಲ ಸ್ಥಿತಿ'ಯಲ್ಲಿದೆ. ಆದ್ದರಿಂದ ಸೂಕ್ಷ್ಮ ಸ್ಥಿತಿಯಲ್ಲಿರುವ ಆ ದೇವರು ಸೂಕ್ಷ್ಮ ಸ್ಥಿತಿಯಲ್ಲಿಯೇ ಆ ನೈವೇದ್ಯವನ್ನು ಸ್ವೀಕರಿಸುವುದರಿಂದ, ನಾವು ಕೊಟ್ಟ ನೈವೇದ್ಯ ಅವನು ಸ್ವೀಕರಿಸಿದ ಮೇಲೂ ಕಿಂಚಿತ್ತೂ ಕಡಿಮೆಯಾಗುವುದಿಲ್ಲ.   

"ನಾವು ಮಾಡಿದ ನೈವೇದ್ಯವನ್ನು ಆ ದೇವರು ಸೂಕ್ಷರೂಪದಲ್ಲಿ ಸ್ವೀಕರಿಸುತ್ತಾನೆ, ನಂತರ ನಾವು ಆ ನೈವೇದ್ಯವೆಂದೇ ' ಪ್ರಸಾದ' ವೆಂದು ಸ್ಥೂಲರೂಪದಲ್ಲಿ ಪಡೆಯುತ್ತೇವೆ" ಎಂದು ಗುರುಗಳು ವಿವರಿಸಿದರು. ಈ ಮಾತುಗಳನ್ನು ಕೇಳಿ ಆ ಶಿಷ್ಯ ' ದೇವರಲ್ಲಿ' ತನ್ನ ಅಪನಂಬಿಕೆಗೆ ನೊಂದು ಗುರುಗಳಿಗೆ ಶರಣಾದ. ಹೀಗೆಯೇ ನಾವು ಪರಮಾತ್ಮನನ್ನು ನಂಬಿ ನಡೆಸುವ ಹಲವಾರು ಕಾರ್ಯಗಳು ಹೇಗೆ ಸಾರ್ಥಕ್ಯವನ್ನು ಪಡೆಯುತ್ತವೆ ಎಂಬುದಕ್ಕೆ ಈ ಕೆಲ ವಿಷಯಗಳನ್ನು ಗಮನಿಸಿ. 

ನಾವು ಉಣ್ಣುವ ಆಹಾರದಲ್ಲಿ 'ಭಕ್ತಿ' ಹೊಕ್ಕರೆ 
ಅದು ' ಪ್ರಸಾದ' ವಾಗುತ್ತದೆ..... 

ನಮ್ಮ ಹಸಿವಿಗೆ 'ಭಕ್ತಿ' ಹೊಕ್ಕರೆ 
ಅದು ' ಉಪವಾಸ' ವಾಗುತ್ತದೆ......  

ನಾವು 'ಭಕ್ತಿ' ಕುಡಿದರೆ 
ಅದು 'ಚರಣಾಮೃತ' ವಾಗುತ್ತದೆ......  

ನಮ್ಮ ಪ್ರಯಾಣ ' ಭಕ್ತಿ' ಪೂರ್ಣವಾದರೆ
ಅದು ' ತೀರ್ಥಯಾತ್ರೆ' ಯಾಗುತ್ತದೆ.......   

ನಾವು ಹಾಡುವ ಸಂಗೀತ' ಭಕ್ತಿ' ಮಯವಾದರೆ 
ಅದು 'ಕೀರ್ತನೆ'ಯಾಗುತ್ತದೆ...... 
 
ನಮ್ಮ ವಾಸದ ಮನೆಯೊಳಕ್ಕೆ' ಭಕ್ತಿ ' ತುಂಬಿದರೆ 
ನಮ್ಮ ಮನೆಯೇ ' ಮಂದಿರ ' ವಾಗುತ್ತದೆ....... 
 
ನಮ್ಮ ಕ್ರಿಯೆ ' ಭಕ್ತಿ' ಪೂರಿತವಾದರೆ 
ನಮ್ಮ ಕಾರ್ಯಗಳು ' ಸೇವೆ' ಯಾಗುತ್ತದೆ.....  

ನಾವು ಮಾಡುವ ಕೆಲಸದಲ್ಲಿ' ಭಕ್ತಿ ' ಇದ್ದರೆ
ಅದು ನಮ್ಮ ' ಕರ್ಮ ' ವಾಗುತ್ತದೆ.....  

ನಮ್ಮ ಹೃದಯದಲ್ಲಿ ' ಭಕ್ತಿ ' ತುಂಬಿದರೆ 
ನಾವು ಮಾನವರಾಗುತ್ತೇವೆ..... 

ನಮ್ಮ ವಿಚಾರವಿನಿಮಯದಲ್ಲಿ ' ಭಕ್ತಿ' ಇದ್ದರೆ
ಅದು ' ಸತ್ಸಂಗ' ವಾಗುತ್ತದೆ....

🙏 ಸರ್ವೇಜನ ಸುಖಿನೋಭವಂತು🙏

ರಂಗೋಲಿ

ರಂಗೋಲಿಗೆ ಹಳೆಯ ತಲೆಮಾರಿಂದ ಬಂದ ಒಂದು ಚಿಕ್ಕ ಕಥೆ ಇದು.

ಆಯುಷ್ಯ ಮುಗಿದೊಡನೆ ಜೀವಾತ್ಮವನ್ನು ಕರೆದೊಯ್ಯಲು ಭೂಮಿಗೆ ಬರುವ ಯಮಧರ್ಮರಾಜ, ಒಮ್ಮೆ ಪತಿವ್ರತೆಯೊಬ್ಬಳ ಪತಿಯ ಪ್ರಾಣವನ್ನು ಕೊಂಡೊಯ್ಯಲು ಸೂರ್ಯ ಹುಟ್ಟುವ ವೇಳೆಗೇ ಪ್ರತ್ಯಕ್ಷನಾದನಂತೆ.

ಅಷ್ಟೊತ್ತಿಗಾಗಲೇ, ಸ್ನಾನ ಮಾಡಿ, ಮನೆಯ ಮುಂದೆ ಕಸ ಗುಡಿಸಿ, ಸಾರಿಸಿ ಸುಂದರವಾಗಿ ರಂಗೋಲಿ ಇಟ್ಟಿದ್ದ ಸಾಧ್ವಿಯ ಕಂಡು ಕಠೋರ ಹೃದಯದ ಯಮನ ಹೃದಯವೂ ಕರಗಿತಂತೆ. ಆಕೆ ಮನೆಯ ಮುಂದೆ ಹಾಕಿದ್ದ ಆ ರಂಗೋಲಿ ಯಮನನ್ನೂ ಆಕರ್ಷಿಸಿತ್ತಂತೆ.

ರಂಗೋಲಿಯ ಕಂಡು ಪ್ರಸನ್ನನಾದ ಯಮದೇವ “ವತ್ಸೆ ನಾನು ನಿನ್ನ ಪತಿಯ ಪ್ರಾಣ ಕೊಂಡೊಯ್ಯಲೆಂದೇ ಬಂದಿದ್ದೆ.

ನಿನ್ನ ಈ ಸುಂದರ ರಂಗೋಲಿ ನನ್ನನ್ನು ಆಕರ್ಷಿಸಿದೆ.“ ಸೂರ್ಯೋದಯಕ್ಕೆ ಮೊದಲೇ ಎದ್ದು ಮನೆಯ ಮುಂದೆ ರಂಗೋಲಿ ಹಾಕುವ ಮನೆಯನ್ನು ನಾನು ಪ್ರವೇಶಿಸುವುದಿಲ್ಲ ಎಂದು ಆಕೆಗೆ ವರ ಇತ್ತನಂತೆ.

ಅದಕ್ಕೇ ಅಂದಿನಿಂದ ಇಂದಿನ ವರೆಗೆ ಭಾರತ ನಾರಿಯರು ಸೂರ್ಯೋದಯಕ್ಕೆ ಮೊದಲೇ ಎದ್ದು, ಮನೆಯ ಮುಂದೆ ರಂಗೋಲಿ ಹಾಕುತ್ತಾರಂತೆ.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
ರಾಮಸೀತಲಕ್ಷ್ಮಣಹನುಮನಿರುವ ರಂಗವಲ್ಲಿ...🙏🙏🙏🙏🙏🙏

ವಿಷ್ಣು ಹೇಗೆ ತನ್ನ ಆಯುಧವಾದ 'ಸುದರ್ಶನ ಚಕ್ರ'ವನ್ನು ಪಡೆದನು

ಸದಾಶಿವನು ಹರಿಗೆ ಸುದರ್ಶನ ಚಕ್ರ ನೀಡುತ್ತಿರುವ ಚಿತ್ರ . 

ಗೋವಾ ರಾಜ್ಯದ ಶ್ರೀ ಶಾಂತಾದುರ್ಗಾ ದೇವಾಲಯದಲ್ಲಿ ಕಂಡುಬರುವುದು .

ವಿಷ್ಣು ಹೇಗೆ ತನ್ನ ಆಯುಧವಾದ 'ಸುದರ್ಶನ ಚಕ್ರ'ವನ್ನು ಪಡೆದನು?*  

ಶಿವ ಪುರಾಣದ ಪ್ರಕಾರ, ವಿಷ್ಣು ವಿಶ್ವವನ್ನು ಎಲ್ಲಾ ದುಷ್ಟಶಕ್ತಿಗಳಿಂದ ರಕ್ಷಿಸಲು ಒಂದು ಅತ್ಯಂತ ಶಕ್ತಿಶಾಲಿಯಾದ ಆಯುಧ ಹೊಂದಲು ಬಯಸಿದನು.

ಇದಕ್ಕಾಗಿ ವಿಷ್ಣು ಒಂದು ಸಾವಿರ ಹೂವುಗಳಿಂದ ಶಿವನನ್ನು ಪೂಜೆ ಮಾಡಿ ವರವನ್ನು ಕೋರುವುದಾಗಿ ತೀರ್ಮಾನ ಮಾಡಿದನು.

ವಿಷ್ಣು ಪೂಜೆಗೆ ಅಗತ್ಯವಿದ್ದ ಸಾಮಾಗ್ರಿಗಳೊಂದಿಗೆ, ಒಂದು ಸಾವಿರ ಕಮಲದ ಹೂಗಳನ್ನು ಸಂಗ್ರಹಿಸಿ ಪೂಜೆ ಪ್ರಾರಂಭಿಸಿದನು.  

ಆದರೆ ಪೂಜೆ ಕೊನೆಗೊಳ್ಳುವ ವೇಳೆಯಲ್ಲಿ ಒಂದು ಹೂವು ಕಡಿಮೆ ಇರುವುದು ವಿಷ್ಣುಗೆ ತಿಳಿಯಿತು.

ತನ್ನ ಪ್ರಾರ್ಥನೆಯನ್ನು ನಿಲ್ಲಿಸದೆ, ಪೂಜೆಗೆ ತಡೆಬಾರದಂತೆ ಹೂವಿನ ಬದಲಾಗಿ ವಿಷ್ಣು ಶಿವನಿಗಾಗಿ ತನ್ನ ಕಣ್ಣನ್ನು ಕಿತ್ತು ಹೂವಿನಂತೆ ಪೂಜೆಯಲ್ಲಿ ಕೊನೆಯ ಕಮಲದ ಹೂವಾಗಿ ಅರ್ಪಿಸಿದನು. 

ಕಮಲದ ಹೂವಿನ ಬದಲಾಗಿ ತನ್ನ ಕಣ್ಣನೇ ಕೊಟ್ಟ ವಿಷ್ಣುಗೆ 'ಪದ್ಮಾಕ್ಷ' ಎಂಬ ಹೆಸರು ಬಂತು. (ಪದ್ಮ ಅಂದರೆ ಕಮಲ ಹಾಗು ಅಕ್ಷಿ ಅಂದರೆ ಕಣ್ಣು ಎಂದು)

ಶಿವನು ಈ ತೀವ್ರವಾದ ಭಕ್ತಿಯನ್ನು ಮೆಚ್ಚಿ, ತಕ್ಷಣ ವಿಷ್ಣು ದೇವನಿಗೆ ಬಯಸಿದ್ದನ್ನು ವರವಾಗಿ ನೀಡುವುದಾಗಿ ತಿಳಿಸಿದರು.

ವಿಷ್ಣು ಅಸುರರನ್ನು ನಾಶ ಮಾಡಲು ಸಹಾಯವಾಗುವ ಒಂದು ಶಸ್ತ್ರದ ಅಗತ್ಯವನ್ನು ವ್ಯಕ್ತಪಡಿಸಿದನು.

ಶಿವನು ವಿಷ್ಣುಗೆ ಸುದರ್ಶನ ಚಕ್ರವನ್ನು ವರವಾಗಿ ನೀಡಿದನು.

ಶಿವನ ಅಂಗುಷ್ಠದಿಂದ ಸೃಷ್ಟಿಸಲಾದ ಒಂದು ಪ್ರಬಲವಾದ ಶಸ್ತ್ರವೇ ಈ ಸುದರ್ಶನ ಚಕ್ರ. 

ರಾಕ್ಷಸ ಜಲಂಧರನನ್ನು ಈ ಅಸ್ತ್ರದಿಂದ ನಾಶ ಮಾಡಲಾಯಿತು. 

ಈ ಸುದರ್ಶನ ಚಕ್ರದಲ್ಲಿ ಎರಡು ವಿರುದ್ಧ ದಿಕ್ಕಿನಲ್ಲಿ ಚಲಿಸುವ, ಹತ್ತು ದಶಲಕ್ಷ ಮುಳ್ಳಿನ ಇರಿಗಳು ಸದಾ ಕಾಲ ಸುತ್ತು ಹೊಡೆಯುತ್ತಿರುತ್ತದೆ.

ಈ ಶಸ್ತ್ರ ಶತ್ರುವಿನ ಕಡೆಗೆ ಎಸೆಯುವುದಷ್ಟೆ ಅಲ್ಲ, ಇದು ಸಂಪೂರ್ಣವಾಗಿ ಮನೋನಿಶ್ಚಯದಿಂದ ಪ್ರಯೋಗಿಸಿ, ಶತ್ರುವನ್ನು ಅಟ್ಟಿಸಿಕೊಂಡು ಹಿಂಬಾಲಿಸುವ ಅಸ್ತ್ರವಾಗಿದೆ. 

ವಿಷ್ಣುವಿನ ಎಲ್ಲಾ ಶತ್ರುಗಳನ್ನು, ಅವರು ಸಂಖ್ಯೆ ಎಷ್ಟೇ ಇದ್ದರು - ವಶಪಡಿಸಿಕೊಳ್ಳಲು ಸಹಾಯ ಮಾಡುವುದ ಈ ಒಂದು ಶಸ್ತ್ರ.

ಈ ಅಸ್ತ್ರ ಎಷ್ಟು ಪ್ರಬಲವಾದದ್ದು ಎಂದರೆ, ಇದನ್ನು ಕೂಡ ಒಂದು ದೇವರಂತೆ ಪೂಜಿಸಲಾಗುತ್ತದೆ.

ವಾಸ್ತವವಾಗಿ, ಸುದರ್ಶನ ಹೋಮ ದಕ್ಷಿಣ ಭಾರತದ ಅನೇಕ ವಿಷ್ಣು ದೇವಾಲಯಗಳಲ್ಲಿ ಮತ್ತು ಶಿವನ ದೇವಸ್ಥಾನಗಳಲ್ಲಿ ಅತ್ಯಂತ ಜನಪ್ರಿಯ ಹೋಮ ಆಗಿದೆ
ಸುದರ್ಶನ ಚಕ್ರ! 

ಸುದರ್ಶನ ಎಂಬ ಪದವು ಎರಡು ಪದಗಳಿಂದ ಆಗಿದೆ. ಸು ಮತ್ತು ದರ್ಶನ. ಸು ಎಂದರೆ ಮಂಗಳಕರವಾದುದು. ದರ್ಶನ ಎಂದರೆ ಕಾಣುವುದು. 

ಸುದರ್ಶನ ಚಕ್ರ ಎಂಬುದು ವಿಷ್ಣುವಿನ ಆಯುಧ. ಈ ಆಯುಧವನ್ನು ವಿಷ್ಣು ದುಷ್ಟ ಸಂಹಾರಕ್ಕಾಗಿ ಬಳಸುತ್ತಿದ್ದ. ಇದರ ಮೂಲದ ಬಗ್ಗೆ ಹಲವು ಕಥೆಗಳಿವೆ. ಒಂದು ಕಥೆಯ ಪ್ರಕಾರ ಬ್ರಹ್ಮ, ವಿಷ್ಣು, ಮಹೇಶ್ವರ ಮೂವರ ಸಂಯೋಜನೆ ಶಕ್ತಿಯಿಂದ ಸುದರ್ಶನ ಚಕ್ರವು ಸೃಷ್ಟಿಯಾಯಿತು.

 ಆಯಾ ಕಥೆಗೆ ಅನುಸಾರವಾಗಿ ಸುದರ್ಶನ ಚಕ್ರದಲ್ಲಿ 6,12 ಅಥವಾ 27 ಮಾನಚಾದ ಆರೆಗಳಿವೆ ಎನ್ನಲಾಗುತ್ತದೆ. ಪ್ರತಿಯೊಂದು ಆರೆಯು ಪುರುಷ ಮತ್ತು ಸ್ತ್ರೀ ತತ್ವವನ್ನು ಹೇಳುತ್ತವೆ. ಸೂರ್ಯನಂತೆ ಬೆಳಕು ಗೋಚರಿಸುತ್ತದೆ. ಮೋಕ್ಷ ಸಾಧನೆಯ ಕಠಿಣ ಹಾದಿಯಲ್ಲಿ ಸಾಗಲು ಭಕ್ತರಿಗೆ ನೆರವಾದ ಕಾರಣದಿಂದ ಸುದರ್ಶನ ಚಕ್ರವನ್ನು ದೇವರ ರೊಪದಲ್ಲಿಯು ಪೂಜಿಸಲಾಗಿತ್ತು.

 ಸುದರ್ಶನ ಹೋಮ ಮಾಡುವುದರಿಂದ ಮನೆ ಮತ್ತು ಕೆಲಸದ ಸ್ಥಳ ಗಳಲ್ಲಿ ಇರುವ ಕೆಟ್ಟ ಶಕ್ತಿಯನ್ನು ಹೊಡೆ ದೋಡಿಸಬಹುದು ಎಂಬ ನಂಬಿಕೆಯಿದೆ.

*"ಶ್ರೀ ಸುದರ್ಶನ ಸ್ತೋತ್ರ" ಮತ್ತು ವಿಶೇಷತೆಗಳು* 

"ಹದಿನಾಲ್ಕು ಲೋಕಗಳಿಗೂ ಒಡೆಯರಾದ 
" ಶ್ರೀ ಲಕ್ಷ್ಮೀನಾರಾಯಣ" ರು ಆಯುಧಗಳಲ್ಲಿ   ಚಕ್ರಗಳಿಗೇ ರಾಜನಾದ 
"ಶ್ರೀ ಸುದರ್ಶನ" ಚಕ್ರವನ್ನು ಹೊಂದಿದ್ದಾರೆ ಎಂದರೆ "ಶ್ರೀ ಸುದರ್ಶನ" ಚಕ್ರದ ಮಹಿಮೆ ಎಷ್ಟಿರಬಹುದು ಅಲ್ಲವೇ..!

ಸುದರ್ಶನ ಚಕ್ರಕ್ಕೆ ಎದುರು ನಿಂತು ಬದುಕಿ ಉಳಿದವರು ಯಾರೂ ಇಲ್ಲ..
"ಶ್ರೀ ಸುದರ್ಶನ ಚಕ್ರದ ಮುಖ್ಯ ಉದ್ಧೇಶ "ದುಷ್ಟ ಶಿಕ್ಷಣೆ, ಶಿಷ್ಠ ರಕ್ಷಣೆ, ಅಧರ್ಮಿಗಳ ನಾಶ..!

" ಶ್ರೀ ಸುದರ್ಶನ ಪೂಜೆಯನ್ನು ಹಲವಾರು ರೀತಿಯಲ್ಲಿ ಮಾಡುತ್ತಾರೆ..

೧. ಶ್ರೀ ಸುದರ್ಶನ ಚಕ್ರ ಪೂಜೆ,
೨. ಶ್ರೀ ಸುದರ್ಶನ ಸಾಲಿಗ್ರಾಮ ಪೂಜೆ..
೩. ಶ್ರೀ ಸುದರ್ಶನ ಆರಾಧನೆ ಪೂಜೆ.
೪. ವಿಗ್ರಹ ಪೂಜೆ..

"ಶ್ರೀ ಸುದರ್ಶನ" ಚಕ್ರಪೂಜೆಯಲ್ಲಿ ಹಲವಾರು ತರಹ ಇದೆ..

೧. ಎಲ್ಲರೂ ಮಾಡುವಂತಹ ಸಾಮಾನ್ಯ ಪೂಜೆ..
೨. ಶ್ರೀ ಸುದರ್ಶನ ಸದಾಚಾರ ಪೂಜೆ..
೩. ಶ್ರೀ ಸುದರ್ಶನ ವಾಮಾಚಾರ ಪೂಜೆ..
೪. ಶ್ರೀ ಸುದರ್ಶನ ಶನಸಾತ್ವಿಕ ಪೂಜೆ..
೫. ಶ್ರೀ ಸುದರ್ಶನ ರಾಜಸ ಪೂಜೆ..
೬. ಶ್ರೀ ಸುದರ್ಶನ ತಾಮಸ ಪೂಜೆ..

ತುಂಬಾ ಇದೆ ..

ಪ್ರಸ್ತುತ "ಶ್ರೀ ಸುದರ್ಶನ" ಚಕ್ರ ಸ್ತೋತ್ರದ ಬಗ್ಗೆ ತಿಳಿದುಕೊಳ್ಳೋಣ..

"ಶ್ರೀ ಸುದರ್ಶನ " ಚಕ್ರ ಸ್ತೋತ್ರವನ್ನು ಓದಿದರೆ ಏನು ಫಲ, ..?

೧. ಯಾರಿಗೆ ಓದುವಾಗ ಜ್ಞಾಪಕವಿದ್ದು ನಂತರ ಮರೆತುಹೋಗುತ್ತಾರೋ ಅಂಥವರು ಓದಿದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ..

೨. ಯಾರಿಗೆ ಮತ್ತು ಯಾರ ಮನೆಯಲ್ಲಿ ಮಾಂತ್ರಿಕ ದೋಷಗಳಿದ್ದರೆ ಅಂಥವರು ಓದಿದರೆ ಮಾಂತ್ರಿಕ ದೋಷ ಪೂರ್ಣವಾಗಿ ನಿವಾರಣೆಯಾಗುತ್ತದೆ..

೩. ಯಾರಿಗೆ ವೈದ್ಯರಿಂದಲೂ ವಾಸಿಯಾಗದ ಖಾಯಿಲೆಗಳಿದ್ದರೆ , ಅಂತವರು ಓದಿದರೆ ಬಹಳ ಬೇಗ ಆರೋಗ್ಯಭಾಗ್ಯ ಪಡೆಯುತ್ತಾರೆ..

೪. ವಿವಾಹಕ್ಕಿರುವ ಅಡೆತಡೆಗಳೆಲ್ಲಾ ನಿವಾರಣೆಯಾಗಿ ಬಹಳ ಬೇಗ ವಿವಾಹವಾಗುತ್ತದೆ..

೫. ಯಾರ ಮನೆಯಲ್ಲಿ ವಿವಾಹವಾದ ಮೇಲೆ ಪ್ರತಿದಿನವೂ ಮನೆಯಲ್ಲಿ ಜಗಳ ಆಡುತ್ತಿದ್ದರೆ, ಮನೆಯಲ್ಲಿ ಶಾಂತಿ ನೆಮ್ಮದಿ ಇಲ್ಲದಿದ್ದರೆ, ಇಂಥವರು ಓದಿದರೆ ಮನೆಯಲ್ಲಿ ಬಹಳ ಶಾಂತಿದೊರೆತು ನೆಮ್ಮದಿಯಿಂದ ಜೀವನ ಮಾಡುತ್ತಾರೆ..

೬. ಯಾರಿಗೆ ತುಂಬಾ ಸಿಟ್ಟು, ಕೋಪ, high BP, ಸಿಡುಕುವ ಸ್ವಭಾವ ಇದ್ದವರು ಓದಿದರೆ , ಮನಸ್ಸಿಗೆ ನೆಮ್ಮದಿ ದೊರೆತು ಶಾಂತಿಯ ಜೀವನ ನಡೆಸುತ್ತಾರೆ..

೭. ನೂತನವಾಗಿ ಕಟ್ಟಿಸಿದ ಮನೆಯ ಗೃಹಪ್ರವೇಶ ಕಾಲದಲ್ಲಿ "ಶ್ರೀ ಸುದರ್ಶನ" ಸ್ತೋತ್ರದಿಂದ ಹೋಮ ಮಾಡಿದರೆ ಮನೆಯು ತುಂಬಾ ಅಭಿವೃದ್ಧಿಯಾಗಿ ಬಹಳ ಶ್ರೇಯಸ್ಸಾಗುತ್ತದೆ..

೮. ಹೆಣ್ಣು ಮಕ್ಕಳು 15 ವರ್ಷವಾದ ನಂತರವೂ  ಋತುಮತಿಯಾಗದೇ ಇದ್ದರೆ ,ಅಂಥವರು ಓದಿದರೆ   ಬಹಳ ಬೇಗ ಋತುಮತಿಯಾಗುತ್ತಾರೆ..

ವಿಶೇಷ ವಿಷಯ : ಕೆಲವು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ, ತುಂಬಾ ಅನಾರೋಗ್ಯ, ಫಿಡ್ಸ್ ತರಹದ ಖಾಯಿಲೆ, ವಿಚಿತ್ರ ಖಾಯಿಲೆಗಳು ಬಂದಿರುತ್ತವೆ, ಅಂಥವರು ಶ್ರೀ ಸುದರ್ಶನ ದೇವರ ಪೂಜೆ ಮಾಡಿ, ನಂತರ "ಶ್ರೀ ಆಂಜನೇಯ ಸ್ವಾಮಿ ಪೂಜಿಸಿದರೆ ಅಥವಾ ಹರಕೆ ಮಾಡಿಕೊಂಡರೆ, ೩ ತಿಂಗಳೊಳಗಾಗಿ ಮಗು ಆರೋಗ್ಯದಿಂದ ಇದ್ದು ದೇಹವು ವಜ್ರಕಾಯವಾಗುತ್ತದೆ..

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ಎಣ್ಣೆಶಾಸ್ತ್ರ (ನರಕ ಚತುರ್ದಶಿಯಂದು)

ಎಣ್ಣೆಶಾಸ್ತ್ರ (ನರಕ ಚತುರ್ದಶಿಯಂದು) – 

ಮೊದಲು ಮನೆಯ ಹಿರಿಯರೊಬ್ಬರು ಎಣ್ಣೆಯನ್ನು ಪರಮಾತ್ಮನಿಗೆ ಸಮರ್ಪಿಸಬೇಕು.  ಈದಿನ ಪ್ರಾತ: ಕಾಲ ಶುಚಿರ್ಭೂತನಾಗಿ ಬಿಸಿನೀರು, ಎಳ್ಳೆಣ್ಣೆ, ಸೀಗೆಪುಡಿ, ಅರಿಶಿನ, ಮುಂತಾದುವನ್ನು ದೇವರ ಮುಂದಿಟ್ಟು
“ತೈಲೇ ಲಕ್ಷ್ಮೀ: ಜಲೇ ಗಂಗಾ ದೀಪಾವಲ್ಯಾಂ ಚತುರ್ದಶೀ |
ಪ್ರಾತ: ಸ್ನಾನಂ ತು ಯ: ಕುರ್ಯಾತ್ ಯಮಲೋಕಂ ನ ಪಶ್ಯತಿ|
ಎಂಬಂತೆ ಲಕ್ಷ್ಮಿಯು ಶ್ರೀಮನ್ನಾರಾಯಣನಿಗೆ ಅಭ್ಯಂಜನ ಸ್ನಾನ ಮಾಡಿಸುವಳೆಂದು ಭಾವಿಸಿ, ನಾರಾಯಣನಿಗೆ ಸಮರ್ಪಿಸಿ, ನಂತರ ಆ ಎಣ್ಣೆಯಿಂದಲೇ ಎಲ್ಲರಿಗೂ ಎಣ್ಣೆ ಶಾಸ್ತ್ರ ಮಾಡತಕ್ಕದ್ದು.

ಎಣ್ಣೆ ಶಾಸ್ತ್ರ ಎಲ್ಲರೂ ಮಾಡಿಸಿಕೊಳ್ಳತಕ್ಕದ್ದು.  ಮೊದಲು ಮನೆಯ ಹೆಂಗಸರು ಗಂಡಸರನ್ನೆಲ್ಲ ಕೂಡಿಸಿ, ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಹಚ್ಚುವ ಶಾಸ್ತ್ರ ಮಾಡುತ್ತಾರೆ.  ಇಲ್ಲಿ ಎಣ್ಣೆ ಶಾಸ್ತ್ರಕ್ಕೆ ಕೂಡುವಾಗ ಉತ್ತರೀಯವಿರಲೇ ಬೇಕು.   ಮೊದಲು ದೇವರಬಳಿ, ತುಳಸಿಯ ಗಿಡದ ಬಳಿ ದೀಪವನ್ನು ಹಚ್ಚಬೇಕು.   ನಂತರ ಒಂದು ಮಣೆಯ ಮೇಲೋ ಅಥವಾ ಚಾಪೆಯ ಮೇಲೋ ಕುಳಿತುಕೊಳ್ಳಬೇಕು.  ಮನೆಯ ಹಿರಿಯ ಹೆಣ್ಣುಮಕ್ಕಳು ಎಲ್ಲರಿಗೂ ಮೊದಲು ಹಣೆಯಲ್ಲಿ ಕುಂಕುಮ ತಿಲಕವಿಡುತ್ತಾರೆ. ಚಿನ್ನದ ಉಂಗುರವನ್ನು  ಬಳಸಿ  ಎಣ್ಣೆ ಶಾಸ್ತ್ರ ಮಾಡಬೇಕು . ಚಿನ್ನದ ಉಂಗುರ ಇಲ್ಲದ ಪಕ್ಷದಲ್ಲಿ ಪಾರಿಜಾತ ಹೂ ಆಗಲಿ ಅಥವಾ ಮಲ್ಲಿಗೆ ಹೂ ಆಗಲಿ ಬಳಸಬಹುದು .   ಪ್ರತಿಯೊಬ್ಬರಿಗೂ ವಿಳ್ಳೆದೆಲೆಯ ಪಟ್ಟಿಯನ್ನು ಕೊಡುತ್ತಾರೆ ಅಥವಾ ಎಲ್ಲರಿಗೂ ಮುಟ್ಟಿಸಿ ಯಾರಾದರೂ ಒಬ್ಬರಿಗೆ ವಿಳ್ಳೆದೆಲೆ ಪಟ್ಟಿಯನ್ನು ನೀಡುತ್ತಾರೆ.   ಒಂದು ಬೆಳ್ಳಿಯ ಬಟ್ಟಲಿನಲ್ಲಿ ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಅರಿಶಿನ ಸೇರಿಸಿ ಎಲ್ಲರಿಗೂ ಹಣೆಯಿಂದ ಪಾದದವರೆಗೂ ಸ್ವಲ್ಪ ಸ್ವಲ್ಪ ಹಚ್ಚುತ್ತಾರೆ. 

ಎಣ್ಣೆ ಶಾಸ್ತ್ರ  ಮಾಡುವಾಗ ಹೇಳುವ ಮಂತ್ರ –

ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣ: |
ಕೃಪ: ಪರಶುರಾಮಶ್ಚ ಸಪ್ತ್ಯೇತೇ ಚಿರಂಜೀವಿನ: ||
ಎಂದು ಏಳು ಸಲ ಭೂಮಿಗೆ ಮುಟ್ಟಿಸಿ, ಮೂರು ಸಲ ತಲೆಗೂ, ಭೂಮಿಗೂ ಎಣ್ಣೆಯನ್ನು ತಗುಲಿಸಿ, ಅರಿಶಿನ ಕುಂಕುಮಗಳಿಂದ ಪೂಜಿಸಿ ಅಭ್ಯಂಜನ ಸ್ನಾನ ಮಾಡಬೇಕು.

 
ನಂತರ ಎಲ್ಲರಿಗೂ ಆರತಿ ಮಾಡಬೇಕು.  ಆ ಸಮಯದಲ್ಲಿ ಈ ದೇವರನಾಮವನ್ನು ಹಾಡುವ ಕ್ರಮವಿದೆ.
ಎಣ್ಣೆ ಶಾಸ್ತ್ರ ಮಾಡುವ ಸಮಯದಲ್ಲಿ  ಹಾಡುವ ಹಾಡು
ಬಣ್ಣಿಸಿ ಗೋಪಿ ತಾ ಹರಸಿದಳು ||ಪ||
ಎಣ್ಣೆಯನೊತ್ತುತ ಯದುಕುಲ ತಿಲಕಗೆ || ಅ.ಪ.||
ಆಯುಷ್ಯವಂತನಾಗು ಅತಿ ಬಲ್ಲಿದನಾಗು |
ಮಯದ ಖಳರ ಮರ್ಧನನಾಗು |
ರಾಯರ ಪಾಲಿಸು ರಕ್ಕಸರ ಸೋಲಿಸು |
ವಾಯಸುತಗೆ ನೀ ನೊಡೆಯನಾಗೆನುತಲಿ ||1||

ಧೀರನು ನೀನಾಗು ದಯಾಂಬುಧಿಯಾಗು |
ಆ ರುಕ್ಮಿಣಿಗೆ ನೀನರಸನಾಗು |
ಮಾರನ ಪಿತನಾಗು ಮಧುಸೂದನನಾಗು |
ದ್ವಾರಾವತಿಗೆ ನೀ ದೊರೆಯಾಗೆನುತಲಿ ||2||
 
ಆನಂದ ನೀನಾಗು ಅಚ್ಯುತ ನೀನಾಗು |
ದಾನವಾಂತಕನಾಗು ದಯವಾಗು |
ಶ್ರೀನಿವಾಸನಾಗು ಶ್ರೀನಿಧಿ ನೀನಾಗು |
ಜ್ಜಾನಿ ಪುರಂದರ ವಿಠಲನಾಗೆನುತಲಿ ||3||
ಆರತಿ ಹಾಡು

ಸರಸಿಜ ನಯನಗೆ ಸಾಗರಶಯನಗೆ
ನಿರುತ ಸುಖಾನಂದಭರಿತನಾದವಗೆ
ಬರೆಸಿ ಉತ್ತರವ ಕಳುಹಿ ಹರುಷದಿ ತಂದ ಸತಿಯ-
ರರಸಿ ರುಕ್ಮಿಣಿ ಸಹಿತ ಹರುಷದಿ ಕುಳಿತ ಹರಿಗೆ
ಸರಸದಾರತಿಯ ಬೆಳಗಿರೆ ||ಪ||

ನಿಂದ್ಯ ಪರಿಹರಿಸಲು ಬಂದು ಯುದ್ಧವ ಮಾಡಿ
ಸಿಂಧುಗಟ್ಟಿದ ರಾಮಚಂದ್ರಗೆವೊಂದಿಸುತ
ತಂದು ಮಗಳ ಧಾರೆ ಮಂದರೋದ್ಧ್ಧರಗೆರೆಯೆ
ಜಾಂಬುವಂತ್ಯೇರ ಸಹಿತಾನಂದದಿ ಕುಳಿತ ಹರಿಗೆ ||1||

ಮಿತ್ರೆ ಕಾಳಿಂದಿ ಭದ್ರಾ ಅಚ್ಚುತನೆಡಬಲ
ಲಕ್ಷಣ ನೀಲ ನಕ್ಷತ್ರದಂದಲಿ
ಒಪ್ಪುವಾ ಚಂದ್ರನಂಥ ವಾರಿಜಾಕ್ಷನು ಇರಲು
ಅಷ್ಟಭಾರ್ಯೆಯರ ಸಹಿತ ನಕ್ಕು ಕುಳಿತ ಹರಿಗೆ ||2||

ನಾಶವಾಗಲಿ ನರಕಾಸುರನ ಮಂದಿರ ಪೊಕ್ಕು
ಏಸುಜನ್ಮದ ಪುಣ್ಯ ಒದಗಿ ಶ್ರೀಹರಿಯು
ಶ್ರೀಶನೊಲಿದ ಭೀಮೇಶಕೃಷ್ಣನು ಸೋಳ-
ಸಾಸಿರ ಸತಿಯರಿಂದ್ವಿಲಾಸದಿ ಕುಳಿತ ಹರಿಗೆ ||3||

ನೀರು ತುಂಬುವ ಹಬ್ಬದ ದಿನ ಏನು ಮಾಡಬೇಕು

🕉*ನೀರು ತುಂಬುವ ಹಬ್ಬದ ದಿನ ಏನು ಮಾಡಬೇಕು?*

1) ಹಂಡೆತುಂಬಿ ಕಾಯಿಸಿ ಸ್ನಾನ ಮಾಡುವ ಅನುಕೂಲ ಇದ್ದವರು ಅದನ್ನು ತಿಕ್ಕಿ ತೊಳೆದು ಅಲಂಕರಿಸಿ ಶುದ್ಧವಾದ ನೀರನ್ನು ಮುಕ್ಕಾಲು ಭಾಗ ತುಂಬಿ ಇಡಿ.

2) ಅನಂತರ ಬಾವಿ ಇದ್ದವರು ತಮ್ಮ ಮನೆಯ ಸಂಪ್ರದಾಯದಂತೆ ನೀರು ಸೇದಿ ತಂದು ಒಂದು ಕಲಶದಲ್ಲಿ ದೇವರ ಕೊಣೆಯೊಳಗೋ ಹೊರಗೋ ಶುದ್ಧವಾದ ಜಾಗದಲ್ಲೋ ಇಡಿ

3) ತಂಡುಲಾಕ್ಷತೆ, ಹೂವು, ಹಣ್ಣು , ಗಂಧ, ಅರಸಿಣ ಪುಡಿ, ಕುಂಕುಮ ಇತ್ಯಾದಿ ಸಿದ್ಧಪಡಿಸಿ.

4) ಮಂತ್ರಾಕ್ಷತೆ , ಹೂವು ಕೈಯಲ್ಲಿ ಹಿಡಿದು ನೀರು ತುಂಬಿದ ಕಲಶದಲ್ಲಿ ತನ್ನ ಅಂಗುಷ್ಟದಿಂದ ಗಂಗೆಗೆ ಜನ್ಮವಿತ್ತ ರಮಾಪತಿ ತ್ರಿವಿಕ್ರಮನನ್ನು ಅವಾಹಿಸಿ.
*ಮಮ ಗುರ್ವಂತರ್ಗತ ವರುಣಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಗಂಗಾಜನಕಂ ರಮಾಸಹಿತ ತ್ರಿವಿಕ್ರಮಂ ಆವಾಹಯಾಮಿ. ಪ್ರಸೀದ ಪ್ರಸೀದ ಭಗವನ್ ಆಗಚ್ಛ ಆಗಚ್ಛ*
ಎಂದು ಕಲಶದಲ್ಲಿ ಹೂವು ಅಕ್ಷತೆ ಹಾಕಿ.
ನಂತರ ಆಸನ, ಅರ್ಘ್ಯ, ಪಾದ್ಯ, ಆಚಮನ, ಮಧುಪರ್ಕ, ಸ್ನಾನ, ವಸ್ತ್ರ, ಯಜ್ನೋಪವೀತ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ತಾಂಬೂಲ, ಮಂಗಲಾರತಿ, ಮಂತ್ರಪುಷ್ಪ, ನಮಸ್ಕಾರ ಅರ್ಪಿಸಿ.

5) ನಂತರ ಅಕ್ಷತೆ ಹೂವು ಕೈಯಲ್ಲಿ ಹಿಡಿದುಕೊಂಡು ಕಲಶದಲ್ಲಿ ಗಂಗಾದೇವಿಯನ್ನು ಅವಾಹಿಸಿ. .
*ಗಂಗೇ ಚ ಯಮುನೇ ಕೃಷ್ಣೇ ಗೋದಾವರೀ ಸರಸ್ವತೀ*|
*ನರ್ಮದೇ ಸಿಂಧು ಕಾವೇರೀ ಜಲೇ$ಸ್ಮಿನ್ ಸನ್ನಿಧಿಮ್ ಕುರು||*
ಕಲಶಮಧ್ಯೆ ತ್ರಿವಿಕ್ರಮ ರೂಪಿಣಃ ಪುತ್ರಿಮ್ ಗಂಗಾಂ ಆವಾಹಯಾಮಿ
ಎಂದು ಅಕ್ಷತೆ ಹೂವು ಹಾಕಿ ಮುಂದಿನ ಮಂತ್ರಗಳಿಂದಲೂ ಕಲಶದಲ್ಲಿ ಅಕ್ಷತೆ ಹಾಕಿ
*ಭೂ: ಗಂಗಾಂ ಆವಾಹಯಾಮಿ, ಭುವಃ ಗಂಗಾಂ ಆವಾಹಯಾಮಿ, ಸ್ವ: ಗಂಗಾಂ ಆವಾಹಯಾಮಿ, ಭೂರ್ಭುವಸ್ವ: ಗಂಗಾಂ ಆವಾಹಯಾಮಿ.*

ಆ ನಂತರ ಮೇಲೆ ಹೇಳಿದಂತೆ ಅಸನದಿಂದ ವಸ್ತ್ರವನ್ನು ಅರ್ಪಿಸಿ ಹರಿದ್ರಾ, ಕುಂಕುಮ, ಗಂಧ , ಪುಷ್ಪ ಅರ್ಪಿಸಿ

6) ಈ ಕೆಳಗಿನ ನಾಮಗಳಿಂದ ಅಕ್ಷತೆ ಹಾಕಿ
*ನಂದಿನ್ಯೈ ನಮಃ, ನಲಿನ್ಯೆ ನಮಃ, ಸೀತಾಯೈ ನಮಃ , ಮಾಲತ್ಯೈ ನಮಃ , ಮಲಾಪಹಾಯೈ ನಮಃ, ವಿಷ್ಣುಪಾದಾಬ್ಜ ಸಂಭೂತಾಯೈ ನಮಃ, ಗಂಗಾಯೈ ನಮಃ, ತ್ರಿಪಥಗಾಮಿನ್ಯೈ ನಮಃ , ಭಾಗೀರಥ್ಯೈ ನಮಃ, ಭೋಗವತ್ಯೈ ನಮಃ, ಜಾಹ್ನವ್ಯೈ ನಮಃ, ತ್ರಿದಶೇಶ್ವರ್ಯೈ ನಮಃ, ಗಂಗಾಭಾಗೀರಥ್ಯೆ ನಮಃ*

7) ಧೂಪವನ್ನು ತೋರಿಸಿ
*ವನಸ್ಪತ್ಯುದ್ಭವೋ ದಿವ್ಯೋ ಗಂಧಾಢ್ಯೋ ಗಂಧ ಉತ್ತಮಃ* |
*ಆಘ್ರೇಯಃ ಸರ್ವದೇವಾನಾ೦ ಧೂಪೋ$ಯಂ ಪ್ರತಿಗೃಹ್ಯತಾಮ್* ||

😎 *ಸಾಜ್ಯ೦ ತ್ರಿವರ್ತಿಸಂಯುಕ್ತ೦ ವಹ್ನಿನಾ ದ್ಯೋತಿತಂ ಮಯಾ|*
*ದೀಪಂ ಗೃಹಾಣ ದೇವೇಶ ತ್ರೈಲೋಕ್ಯತಿಮಿರಾಪಹ*||
ಎನ್ನುತ್ತಾ ಮೂರು ಬತ್ತಿಯ ಆರತಿ ತೋರಿಸಿ ನಂದಿಸಿ

9) ಹಣ್ಣು ಕಾಯಿ ಮತ್ತು ಅನುಕೂಲ ಇದ್ದಲ್ಲಿ ಇತರ ನೈವೇದ್ಯಗಳನ್ನು ಮೊದಲು ತ್ರಿವಿಕ್ರಮ ದೇವರಿಗೆ ಅರ್ಪಿಸಿ ಅನಂತರ ರಮಾದೇವಿ , ಮುಖ್ಯಪ್ರಾಣ ದೇವರಿಗೆ ಅರ್ಪಿಸಿ. ಇದರೊಳಗಿಂದ ಸ್ವಲ್ಪ ಬೇರೊಂದು ತಟ್ಟೆಯಲ್ಲಿ ಬಡಿಸಿ ಭಾಗೀರಥಿ ದೇವಿಗೆ ಅದನ್ನು ನಿವೇದಿಸಿ.

10) ತದನಂತರ ಕರ್ಪೂರ ಹಾಕಿ ಮಹಾಮಂಗಳಾರತಿ ಮೊದಲು ತ್ರಿವಿಕ್ರಮ ದೇವರು ನಂತರ ರಮಾದೇವಿ ಪ್ರಾಣದೇವರಿಗೆ ತೋರಿಸಿ ಭಾಗೀರಥಿಗೆ ತೋರಿಸಿ.

11) *ನಾರಾಯಣಾಯ ವಿದ್ಮಹೇ ವಾಸುದೇವಾಯ ದೀಮಹಿ ತನ್ನೋ ವಿಷ್ಣು: ಪ್ರಚೋದಯಾತ್*
ಎನ್ನುತ್ತಾ ತ್ರಿವಿಕ್ರಮ ದೇವರಿಗೆ ಮಂತ್ರಪುಷ್ಪಾ೦ಜಲಿ ಅರ್ಪಿಸಿ.

12) ಭಾಗೀರಥೀ ದೇವಿಯನ್ನು ಪ್ರಾರ್ಥಿಸಿ.
*ಹೇ ಗಂಗೇ! ತವ ಕೋಮಲಾಂಘ್ರಿ* *ನಲಿನಂ ರಂಭೋರು ನೀವಿಲಸತ್*
*ಕಾಂಚೀದಾಮ ತನೂದರಂ ಘನಕುಚ ವ್ಯಾಕೀರ್ಣಹಾರಂ ವಪು:* |
*ಸನ್ಮುದ್ರಾ೦ಗದ ಕಂಕಣಾವೃತಕರ೦* *ಸ್ಮೇರಂ ಸ್ಫುರತ್ಕುಂಡಲಂ*
*ಸಾರಂಗಾಕ್ಷಿ ಜಲಾನ್ಯದಿಂದುರುಚಯೇ ಜಾನಂತಿ ತೇ$ನ್ಯೇ ಜಲಾತ್ |*
ಪ್ರಾರ್ಥನಾಂ ಸಮರ್ಪಯಾಮಿ ಎನ್ನುತ್ತ ಅಕ್ಷತೆ ಹಾಕಿ ನಮಸ್ಕರಿಸಿ.

13) ತದನಂತರ
ಯಸ್ಯ ಸ್ಮೃತ್ಯಾ ಶ್ಲೋಕ ಹೇಳಿ
ಅನೇನ ಅಸ್ಮದ್ ಗುರ್ವಂತರ್ಗತ ಭಾರತೀರಮಣ ಮುಖ್ಯಪ್ರಾಣಾ೦ತರ್ಗತ ಗಂಗಾಜನಕ ಶ್ರೀರಮಾತ್ರಿವಿಕ್ರಮ ರೂಪಿ ಶ್ರೀಲಕ್ಷ್ಮೀನಾರಾಯಣ: ಪ್ರೀಯತಾಂ ಪ್ರೀತೋ ಭಾವತು ತತ್ ಸರ್ವಂ ಶ್ರೀಕೃಷ್ಣಾರ್ಪಣಾಮಸ್ತು ಎಂದು ಅರ್ಪಿಸಿ.

14) ಈಗ ಆ ಕಲಶದ ನೀರನ್ನು ಗಂಟೆ, ಜಾಗಟೆ, ಶಂಖಾದಿ ವಾದ್ಯ ಪುರಸ್ಸರ ತುಂಬಿಟ್ಟ ಹಂಡೆಯಲ್ಲಿ ಹಾಕಿ

15) ಸೂರ್ಯಾಸ್ತದ ನಂತರ ಇಂದಿನಿಂದ ಆಕಾಶದೀಪವನ್ನು ಹಚ್ಚಬೇಕು.
ಒಬ್ಬ ಮನುಷ್ಯನ ಎತ್ತರದಷ್ಟು ಒಂದು ಕೋಲನ್ನು ಅಂಗಳದಲ್ಲಿ ನೆಟ್ಟು (ಬಿದಿರಿನ ಕೋಲು ಉಪಯೋಗಿಸಬಾರದು) ಆ ಕೋಲಿನ ತುದಿಯಲ್ಲಿ ಅಷ್ಟದಲ ಕಮಲಾಕಾರದಲ್ಲಿ ಎಂಟು ದಿಕ್ಕುಗಳಲ್ಲಿ ಎಂಟು ದೀಪಗಳನ್ನೂ ಮಧ್ಯೆ ಒಂದು ದೊಡ್ಡ ದೀಪವನ್ನೂ ಹಚ್ಚಬೇಕು. ಎಳ್ಳೆಣ್ಣೆ ಬಿಟ್ಟು ಬೇರೆ ಎಣ್ಣೆ ಉಪಯೋಗಿಸಬಾರದು.
ಇದನ್ನು ಒಂದು ತಿಂಗಳು ಹಚ್ಚಬೇಕು.

16) ಹಾಗೆಯೇ ಮನೆಯ ಹೊರಗೆ ಎತ್ತರದಲ್ಲಿ ಯಮದೇವರಿಗೆ ಕೂಡಾ ಇಂದು ಒಂದು ದೀಪ ಹಚ್ಚಬೇಕು.
****
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು