ವಿಷ್ಣು ಸಹಸ್ರನಾಮವೇ ಯಾಕೆ?

*ವಿಷ್ಣು ಸಹಸ್ರನಾಮವೇ ಯಾಕೆ?*

ಒಬ್ಬೊಬ್ಬ ದೇವತೆಯ ಉಪಾಸನೆ ಮಾಡಿದರೆ ಒಂದೊಂದು ಫಲ. ಬೃಹಸ್ಪತಿ ಆರಾಧನೆಯಿಂದ ಬ್ರಹ್ಮವರ್ಚಸ್ಸು, ಇಂದ್ರನ ಆರಾಧನೆಯಿಂದ ಇಂದ್ರಿಯ ಪಾಟವ, ದಕ್ಷಪ್ರಜಾಪತಿಗಳ ಆರಾಧನೆಯಿಂದ ಪ್ರಜಾಸಂಪತ್ತು, ಸತ್ಸಂತಾನ, ಮಹಾಲಕ್ಷ್ಮೀ ಉಪಾಸನೆಯಿಂದ ಐಶ್ವರ್ಯ, ಅಗ್ನಿಯಿಂದ ತೇಜಸ್ಸು, ವಸುಗಳಿಂದ ಸಂಪತ್ತು, ಅದಿತಿಯಿಂದ ಅನ್ನಾಹಾರ, ದೇವತೆಗಳಿಂದ ಸ್ವರ್ಗಪ್ರಾಪ್ತಿ, ವಿಶ್ವೇದೇವತೆಗಳಿಂದ ಭೂಸಂಪತ್ತು, ಅಶ್ವಿನಿದೇವತೆಗಳಿಂದ ಆಯುರ್ವೃದ್ಧಿ, ಗಂಧರ್ವರಿಂದ ಸ್ಪುರದ್ರೂಪ, ಸೌಂದರ್ಯ, ಊರ್ವಶಿಯಿಂದ ಸ್ತ್ರೀವಿಹಾರ, ಯಜ್ಞದಿಂದ ಕೀರ್ತಿ, ಈಶ್ವರನಿಂದ ವಿದ್ಯೆ ಹಾಗೂ ಒಳ್ಳೆಮನೋಭಾವ, ಗೌರೀಪೂಜೆಯಿಂದ ಅನ್ಯೋನ್ಯತೆ, ಸುಖದಾಂಪತ್ಯ, ಪಿತೃಗಳಿಂದ ಸಂತತಿ ವೃದ್ಧಿ ಹೀಗೆ ಒಬ್ಬೊಬ್ಬ ದೇವತೆಯಿಂದ ಒಂದೊಂದು ಸಿದ್ಧಿಯಾದರೆ, ವಿಷ್ಣುಸಹಸ್ರನಾಮ ಪಾರಾಯಣದ ಮೂಲಕ ಮಹಾವಿಷ್ಣುವಿನ ಉಪಾಸನೆ ಮಾಡಿದರೆ ಈ ಎಲ್ಲ ಸಿದ್ಧಿಗಳೂ ಒಟ್ಟಿಗೆ ಸುಲಭವಾಗಿ ಲಭಿಸುವುದು.

*ಪಾರಾಯಣ ಎಂದರೆ…*

ವಿಷ್ಣುಸಹಸ್ರನಾಮ ಪಾರಾಯಣ ಮಾಡುವವರು ಅದರಲ್ಲೇ ಪರಾಯಣರಾಗಿ ಪಾರಾಯಣ ಮಾಡಬೇಕು. ಪರಾಯಣ ಎಂದರೆ ಪರಮಾತ್ಮನಲ್ಲಿ ಮುಳುಗಿರಬೇಕು. ಅವನೇ ಮತಿ, ಅವನೇ ಗತಿ, ಪರಮಾನಂದ ಸ್ಥಿತಿ ಎಂಬ ಅನುಭವ ಬರಬೇಕು. ಸಾಮೂಹಿಕ ಪಾರಾಯಣ ಆಗುವಾಗ ಸಹಸ್ರನಾಮದಲ್ಲಿನ ನಾಮಮಂತ್ರ ತರಂಗಗಳು ಸುತ್ತಲಿನ ವಾತಾವರಣವನ್ನು ಶುದ್ಧಿಗೊಳಿಸುತ್ತ ಹೃದಯದಲ್ಲಿ ದೈವಿಕ ಆನಂದದ ಅನುಭವ ತರುತ್ತವೆ. ಮನಸ್ಸಿಗೆ ಶಾಂತಿ, ನೆಮ್ಮದಿ, ಆನಂದ ದೊರಕುತ್ತದೆ. ಹಬ್ಬ, ವ್ರತ, ಉತ್ಸವಗಳಲ್ಲಿ ವಿಶೇಷವಾಗಿ ಪಾರಾಯಣ ಮಾಡಲಾಗುತ್ತದೆ. ಭೀಷ್ಮ ಏಕಾದಶಿ, ವೈಕುಂಠ ಏಕಾದಶಿ, ಪ್ರಥಮ ಏಕಾದಶಿ ದಿನಗಳು ಪಾರಾಯಣಕ್ಕೆ ಪ್ರಶಸ್ತವಾದ ದಿನಗಳು. ಪಾರಾಯಣ ಮಾಡುವಾಗ ಪೂರ್ವ ಅಥವಾ ಉತ್ತರಾಭಿಮುಖವಾಗಿ ಮಾಡಬೇಕು. ಸಾಮೂಹಿಕ ಅಥವಾ ಕುಟುಂಬದವರೆಲ್ಲ ಒಟ್ಟಿಗೆ ಕುಳಿತು ಪಾರಾಯಣ ಮಾಡಿದರೆ ಹೆಚ್ಚಿನ ಅನುಗ್ರಹವಿರುತ್ತದೆ. ಆತ್ಮಸುಖ, ಯೋಗಕ್ಷೇಮ, ಭಾಗ್ಯಸೌಭಾಗ್ಯ, ಧೈರ್ಯ, ಆತ್ಮಸ್ಥೈರ್ಯ, ಸ್ಮರಣಶಕ್ತಿ, ಸ್ಪುರಣಶಕ್ತಿ, ಮೇಧಾಶಕ್ತಿ ಹಾಗೂ ಕೀರ್ತಿಗಳನ್ನು ತಂದುಕೊಡುತ್ತದೆ.

*ಸಾಡೇಸಾತ್- ಶನಿಕಾಟ*  -ವಿಷ್ಣುಸಹಸ್ರನಾಮದವರಿಗೆ ಇರುವುದಿಲ್ಲ. ಎಲ್ಲ ತಾಪತ್ರಯ ಪರಿಹಾರಕ, ಇಷ್ಟಪ್ರದ, ಅನಿಷ್ಟ ನಿವಾರಕ ಪವಿತ್ರಸಹಸ್ರನಾಮವೆಂದೇ ಇದು ವಿಶಿಷ್ಟವಾಗಿದೆ.

*ಸ್ವರ ತರಂಗಗಳ ಪ್ರಭಾವ*

ಬೃಹತೀಸಹಸ್ರ ಶಾಸ್ತ್ರಗ್ರಂಥವು ಋಗ್ವೇದದ ಒಂದುಸಾವಿರ ಋಕ್ಗಳ ಒಂದು ಸುಂದರಹಾರ. ಬೃಹತೀ ಛಂದಸ್ಸಿನಲ್ಲಿ ಪ್ರತಿಸ್ತೋತ್ರದಲ್ಲಿಯೂ ಮೂವತ್ತಾರು ಸ್ವರಾಕ್ಷರ ಹಾಗೂ ಮೂವತ್ತಾರು ವ್ಯಂಜನಾಕ್ಷರ ಇರುತ್ತದೆ. ಎಂದರೆ ಪ್ರತಿಸ್ತೋತ್ರದಲ್ಲಿ 72 ಅಕ್ಷರಗಳು. ಒಂದುಸಾವಿರ ಸ್ತೋತ್ರಗಳಲ್ಲಿ

72 ಸಾವಿರ ಅಕ್ಷರಗಳು. ಬೃಹತೀ ಸಹಸ್ರದ ವ್ಯಾಖ್ಯೇಯವೇ ವಿಷ್ಣುಸಹಸ್ರನಾಮ ಸ್ತೋತ್ರ. ವಿಷ್ಣುಸಹಸ್ರನಾಮ 72 ಸಾವಿರ ನಾಡಿಗಳನ್ನು ಸಂಸ್ಕಾರ ಮಾಡಿ ನಾಡೀಶುದ್ಧಿ, ದೇಹಶುದ್ಧಿ, ಮನಶುದ್ಧಿ ಮಾಡುತ್ತದೆ.

*ಸಂವಿಧಾನ*

ಈ ಮಹಾಮಂತ್ರದ ದೈವ ಮಹಾವಿಷ್ಣು, ಇದನ್ನು ನೀಡಿದ ಋಷಿ ವೇದವ್ಯಾಸರು, ಇದರ ಛಂದಸ್ಸು ಅನುಷ್ಟುಪ್, ಈ ಮಂತ್ರದ ಬೀಜಭಾಗ ಅಮೃತಾಂಶೂದ್ಭವೋ ಭಾನುಃ ಸ್ತೋತ್ರ, ಈ ಮಂತ್ರದ ಮಹಾಶಕ್ತಿ ದೇವಕೀನಂದನಃ ಸ್ರಷ್ಟಾ ಸ್ತೋತ್ರ. ಇದರ ಪರಮಮಂತ್ರ ಉದ್ಭವಃ ಕ್ಷೋಭಣೋ ದೇವಃ ಸ್ತೋತ್ರ, ಈ ಮಂತ್ರದ ಅನಾವರಣ ಭಾಗ ಶಂಖಭೃತ್ ನಂದಕೀ ಚಕ್ರೀ ಸ್ತೋತ್ರ. ಈ ಮಂತ್ರದ ಅಸ್ತ್ರಭಾಗ ಶಾಂರ್šಧನ್ವಾ ಗದಾಧರಃ ಸ್ತೋತ್ರ, ಈ ಮಂತ್ರದ ಜಾಗೃತಿಭಾಗ ರಥಾಂಗಪಾಣಿಃ ಅಕ್ಷೋಭ್ಯ ಇದರ ಕವಚ ಭಾಗ ತ್ರಿಸಾಮಾಸಾಮಗಸಾಮ. ಇಡೀ ಮಂತ್ರದ ಮೂಲಪ್ರೇರಣೆ ಆನಂದಂ ಪರಬ್ರಹ್ಮ.

ಈ ಮಂತ್ರದ ಪಹರೆ ಋತುಃ ಸುದರ್ಶನಃ ಕಾಲ ಸ್ತೋತ್ರ. ವಿಷ್ಣುವೇ ಜಗದೊಡೆಯ ಎಂಬುವುದೇ ಧ್ಯಾನ. ಇದರ ಪಠಣ, ಜಪ, ಪಾರಾಯಣವು ವಿಷ್ಣುಪ್ರೇರಣೆಯಿಂದಾಗಿದ್ದು, ಅದರಿಂದ ವಿಷ್ಣುಪ್ರೀತನಾಗಲಿ, ಎಂಬ ಭಾವನೆಯೇ ಇದರ ಪ್ರಯೋಜನ.

*ಸಕಲ ಪುರುಷಾರ್ಥ ಸಿದ್ಧಿ*

ಶರಪಂಜರದ ಮೇಲೆ ಮಲಗಿದ್ದು ಭೀಷ್ಮರನ್ನು ಧರ್ಮರಾಜ ಕೇಳುತ್ತಾನೆ, ಇಡೀ ಜಗತ್ತಿನ ದೈವ ಯಾವುದು? ಯಾರ ಸ್ತುತಿ, ಕೀರ್ತನೆ, ಅರ್ಚನೆಯಿಂದ ಶ್ರೇಯಸ್ಸಾಗುತ್ತದೆ? ಸಮಸ್ತ ಧರ್ಮಗಳಲ್ಲಿ ಶ್ರೇಷ್ಠ ಧರ್ಮ ಯಾವುದು? ಯಾರ ಜಪ ಮಾಡುವುದರಿಂದ ಸಂಸಾರಚಕ್ರದ ಬಂಧನದಿಂದ, ಜನನ-ಮರಣಗಳ ಚಕ್ರದಿಂದ ಮುಕ್ತರಾಗಬಹುದು? ಈ ಎಲ್ಲ ಪ್ರಶ್ನೆಗಳಿಗೂ ಭೀಷ್ಮಾಚಾರ್ಯರು ಒಂದೇ ಉತ್ತರ ಹೇಳುತ್ತಾರೆ ಜಗತ್ಪ್ರಭುವೂ, ದೇವದೇವನೂ, ಅನಂತನೂ, ಪುರುಷೋತ್ತಮನೂ ಆದ ಮಹಾವಿಷ್ಣುವನ್ನು ವಿಷ್ಣುಸಹಸ್ರನಾಮದ ಮೂಲಕ ಸ್ತುತಿ ಮಾಡುವ ಎಲ್ಲರೂ ಸರ್ವದುಃಖಗಳಿಂದ ಪಾರಾಗುತ್ತಾರೆ. ಅಷ್ಟೇ ಅಲ್ಲ, ಅಂತಹವರು ನಿರಂತರವಾಗಿ ಪ್ರಗತಿಯ, ಅಭ್ಯುದಯದ, ಯಶಸ್ಸಿನ ಹಾದಿಯಲ್ಲಿ ಇರುತ್ತಾರೆ. ಮಂತ್ರದ್ರಷ್ಟ್ರಾರರಾದ ಋಷಿಮುನಿಗಳಿಂದ ಪರಿಪರಿಯಾಗಿ ಸ್ತುತಿಸಲ್ಪಟ್ಟ ಈ ವಿಷ್ಣುಸಹಸ್ರನಾಮದ ಪಾರಾಯಣದಿಂದ ಎಲ್ಲ ಪುರುಷಾರ್ಥಗಳೂ ಸಿದ್ಧಿಯಾಗುತ್ತವೆ.

ಜಪಗಳಲ್ಲಿ ಸರ್ವಶ್ರೇಷ್ಠ

*ವಿಷ್ಣುಸಹಸ್ರನಾಮದಲ್ಲಿ ‘ಧರ್ಮರಾಜ ಕಿಂ ಜಪನ್ ಮುಚ್ಯತೇ ಜಂತುಃ*

ಜನ್ಮಸಂಸಾರಬಂಧನಾತ್’ ಎಂದು ಕೇಳಿದ ಪ್ರಶ್ನೆಗೆ ಜಪಗಳಲ್ಲಿ ವಿಷ್ಣುಸಹಸ್ರನಾಮ ಜಪಶ್ರೇಷ್ಠ ಎಂದು ಭೀಷ್ಮರು ಉತ್ತರಿಸಿದ್ದಾರೆ. ವಿಷ್ಣುಸಹಸ್ರನಾಮ ಪಾರಾಯಣ ಮಾಡುವಾಗ ನಾಮಮಂತ್ರ ತರಂಗಗಳು ಪರಿಸರ ಶುದ್ಧಿಮಾಡಿ, ಅಪೂರ್ವ ಸನ್ನಿಧಾನ ನಿರ್ಮಾಣ ಮಾಡುತ್ತವೆ.

*ಹನ್ನೊಂದರ ಮಹತ್ವ*

ಧರ್ಮ, ಭಕ್ತಿ, ಜ್ಞಾನ, ಪ್ರಜ್ಞೆ, ಮೇಧಾಶಕ್ತಿ, ಧೃತಿ, ಸ್ಥಿತಿ, ಬಲ, ಶ್ರವಣ, ಮನನ, ಶೀಲ, ವಿನಯ, ವಿದ್ಯೆ, ನೆಮ್ಮದಿ, ಮನಶ್ಶಾಂತಿ ಇವಿಷ್ಟು ವಿಷ್ಣುಸಹಸ್ರನಾಮದ ಚಕ್ರದಿಂದ ಎಂದರೆ ಹನ್ನೊಂದು ದಿನ ಪ್ರತಿದಿನ 11 ಬಾರಿ ಪಾರಾಯಣ ಮಾಡುವುದರಿಂದ ಲಭ್ಯವಾಗುತ್ತವೆ. ಹನ್ನೊಂದು ಚಕ್ರ ಮುಗಿಸಿದವರಿಗೆ ಪುನರ್ಜನ್ಮ ಇಲ್ಲ. ವಿಷ್ಣುಸಹಸ್ರನಾಮ ಇದು, ಪವಿತ್ರಕ್ಕೆ ಪವಿತ್ರ, ಮಂಗಳಕ್ಕೆ ಮಂಗಳ, ಇದನ್ನು ಪಾರಾಯಣ ಮಾಡುವವರ ಮನೆ, ಮನ ಪಾವನವಾಗುತ್ತದೆ.

*ವಿಷ್ಣು ಸಹಸ್ರನಾಮ ಚಕ್ರ*

ಯಾರು ವಿಷ್ಣುಸಹಸ್ರನಾಮ ಹೇಳುವರೋ, ಕೇಳುವರೋ ಅಂತಹವರಿಗೆ ಇಹದಲ್ಲಿ, ಪರದಲ್ಲಿ ಎಂದಿಗೂ ಅಶುಭ, ಅಮಂಗಳವೆನ್ನುವುದೇ ಇಲ್ಲ. ಇದರ ಪಾರಾಯಣದಿಂದ ಯಶಸ್ಸು, ಶ್ರೇಯಸ್ಸು, ಲಭ್ಯ. ಎಲ್ಲ ತಾಪತ್ರಯ, ಭಯಗಳೂ ನಿವಾರಣೆಯಾಗುತ್ತವೆ. ಆರೋಗ್ಯ, ಕಾಂತಿ, ಬಲ, ಸೌಂದರ್ಯ, ಹೆಚ್ಚುತ್ತದೆ. ಅಂತಃಕರಣ ಶುದ್ಧವಾಗುತ್ತದೆ. ಶ್ರದ್ಧೆ ಭಕ್ತಿಯಿಂದ ವಿಷ್ಣು ಸಹಸ್ರನಾಮಚಕ್ರ ಪೂರೈಸಿದವರು ಸುಖ, ಕ್ಷಮೆ, ಸಂಪತ್ತು, ಧೈರ್ಯ, ಸ್ಮೃ, ಕೀರ್ತಿಗಳನ್ನು ಹೊಂದುತ್ತಾರೆ. ಶೀಘ್ರದಲ್ಲಿ ಎಲ್ಲ ನೋವು, ಸಂಕಟಗಳಿಂದ ಪಾರಾಗುತ್ತಾರೆ. ಶಾಂತಿ, ಸಮಾಧಾನ, ಧ್ಯಾನ, ನೆಮ್ಮದಿ, ದಯೆ, ತ್ಯಾಗ ಪ್ರೇಮ ಅವರಿಗೆ ಲಭಿಸುತ್ತವೆ. ವಿಷ್ಣುಸಹಸ್ರನಾಮ ಸರ್ವಶಾಸ್ತ್ರಗಳ ಸಾರ, ಸಾರೋದ್ಧಾರ. ಒಂದೊಂದು ನಾಮಕ್ಕೂ ನೂರು ನೂರು ಅರ್ಥಗಳು. ಭಗವಂತನ ಸಾವಿರ ರೂಪಗಳ ಸಾವಿರನಾಮಗಳೇ ವಿಷ್ಣುಸಹಸ್ರನಾಮ. ಅದು ಬೃಹತೀಸಹಸ್ರದ ಸಾರ....

ಆರ್ಯಾದುರ್ಗಾಷ್ಟಕಮ್

॥ ಆರ್ಯಾದುರ್ಗಾಷ್ಟಕಮ್ ॥

ಶ್ರೀಗಣೇಶಾಯ ನಮಃ ॥

ಆರ್ಯಾದುರ್ಗಾಽಭಿಧಾನಾ ಹಿಮನಗದುಹಿತಾ ಶಂಕರಾರ್ಧಾಸನಸ್ಥಾ
     ಮಾತಾ ಷಾಣ್ಮಾತುರಸ್ಯಾಖಿಲಜನವಿನುತಾ ಸಂಸ್ಥಿತಾ ಸ್ವಾಸನೇಽಗ್ರ್ಯೇ ।
ಗೀತಾ ಗನ್ಧರ್ವಸಿದ್ಧೈರ್ವಿರಚಿತಬಿರುದೈರ್ಯಾಽಖಿಲಾಂಗೇಷು ಪೀತಾ
     ಸಂವೀತಾ ಭಕ್ತವೃನ್ದೈರತಿಶುಭಚರಿತಾ ದೇವತಾ ನಃ ಪುನಾತು ॥ 1॥

ಮಾತಸ್ತ್ವಾಂ ಸಾಮ್ಬಪತ್ನೀಂ ವಿದುರಖಿಲಜನಾ ವೇದಶಾಸ್ತ್ರಾಶ್ರಯೇಣ
     ನಾಹಂ ಮನ್ಯೇ ತಥಾ ತ್ವಾಂ ಮಯಿ ಹರಿದಯಿತಾಮಮ್ಬುಜೈಕಾಸನಸ್ಥಾಮ್ ।
ನಿತ್ಯಂ ಪಿತ್ರಾ ಸ ದೇಶೇ ನಿಜತನುಜನಿತಾ ಸ್ಥಾಪ್ಯತೇ ಪ್ರೇಮಭಾವಾತ್
     ಏತಾದೃಶ್ಯಾನುಭೂತ್ಯೋ ದಧಿತಟಸವಿಧೇ ಸಂಸ್ಥಿತಾಂ ತರ್ಕಯಾಮಿ ॥ 2॥

ನಾಸೀದಾಲೋಕಿತಾ ತ್ವತ್ತನುರತಿರುಚಿರಾಽದ್ಯಾವಧೀತ್ಯಾತ್ಮದೃಷ್ಟ್ಯಾ
     ಲೋಕೋಕ್ತ್ಯಾ ಮೇ ಭ್ರಮೋಽಭೂತ್ಸರಸಿಜನಿಲಯೇ ನಾಮಯುಗ್ಮಾಕ್ಷರಾರ್ಥಾತ್ ।
ಸೋಽಯಂ ಸರ್ವೋ ನಿರಸ್ತಸ್ತವ ಕನಕಮಯೀಂ ಮೂರ್ತಿಮಾಲೋಕ್ಯ ಸದ್ಯಃ
     ಸಾಽಪರ್ಣಾ ಸ್ವರ್ಣವರ್ಣಾರ್ಣವತನುಜನಿತೇ ನ ಶ್ರುತಾ ನಾಪಿ ದೃಷ್ಟಾ ॥ 3॥

ಶ್ರೀಸೂಕ್ತೋಕ್ತಾದ್ಯಮನ್ತ್ರಾತ್ಕನಕಮಯತನುಃ ಸ್ವರ್ಣಕಂಜೋಚ್ಚಹಾರಾ
     ಸಾರಾ ಲೋಕತ್ರಯಾನ್ತರ್ಭಗವತಿಭವತೀತ್ಯೇವಮೇವಾಗಮೋಕ್ತಮ್ ।
ತನ್ನಾಮೋಕ್ತಾಕ್ಷರಾರ್ಥಾತ್ಕಥಮಯಿ ವಿತಥಂ ಸ್ಯಾತ್ಸರಿನ್ನಾಥಕನ್ಯೇ
     ದೃಷ್ಟಾರ್ಥೇ ವ್ಯರ್ಥತರ್ಕೋ ಹ್ಯನಯಪಥಗತಿಂ ಸೂಚಯತ್ಯರ್ಥದೃಷ್ಟ್ಯಾ ॥ 4॥

ತನ್ವಸ್ತೇ ಮಾತರಸ್ಮಿಂಜಗತಿ ಗುಣವಶಾದ್ವಿಶ್ರುತಾಸ್ತಿಸ್ರ ಏವ
     ಕಾಲೀ ಶ್ರೀರ್ಗೀಶ್ಚ ತಾಸಾಂ ಪ್ರಥಮಮಭಿಹಿತಾ ಕೃಷ್ಣವರ್ಣಾ ಹ್ಮಪರ್ಣಾ ।
ಲಕ್ಷ್ಮೀಸ್ತು ಸ್ವರ್ಣವರ್ಣಾ ವಿಶದತನುರಥೋ ಭಾರತೀ ಚೇದಮೂಷು
     ಸ್ವಚ್ಛಾ ನೋನಾಪಿ ಕೃಷ್ಣಾ ಭಗವತಿ ಭವತೀ ಶ್ರೀರಸೀತ್ಯೇವ ಸಿದ್ಧಮ್ ॥ 5॥

ನಾಮಾದ್ಯಾಯಾಃ ಸ್ವರೂಪಂ ಕನಕಮಯಮಿದಂ ಮಧ್ಯಮಾಯಾಶ್ಚ ಯಾನ-
     ಮನ್ತ್ಯಾಯಾಃ ಸಿಂಹರೂಪಂ ತ್ರಿತಯಮಪಿ ತನೌ ಧಾರಯನ್ತ್ಯಾಸ್ತವೇದೃಕ್ ।
ದೃಷ್ಟ್ವಾ ನೂತ್ನೈವ ಸರ್ವಾ  ವ್ಯವಹೃತಿಸರಣೀರಿನ್ದಿರೇ ಚೇದತರ್ಕ್ಯಾ
     ತ್ವಾಮಾದ್ಯಾಂ ವಿಶ್ವವನ್ದ್ಯಾಂ ತ್ರಿಗುಣಮಯತನುಂ ಚೇತಸಾ ಚಿನ್ತಯಾಮಿ ॥ 6॥

ತ್ವದ್ರೂಪಜ್ಞಾನಕಾಮಾ ವಿವಿಧವಿಧಸಮಾಕೢಪ್ತತರ್ಕೈರನೇಕೈ-
     ರ್ನೋ ಶಕ್ತಾ ನಿರ್ಜರಾಸ್ತೇ ವಿಧಿ-ಹರಿ-ಹರಸಂಜ್ಞಾ ಜಗದ್ವನ್ದ್ಯಪಾದಾಃ ।
ಕಾ ಶಕ್ತಿರ್ಮೇ ಭವಿತ್ರೀ ಜಲನಿಧಿತನಯೇ ಜ್ಞಾತುಮುಗ್ರಂ ತವೇದಂ
     ರೂಪಂ ನಾಮ್ನಾ ಪ್ರಭಾವಾದಪಿ ವಿತಥಫಲೋ ಮೇ ಬಭೂವ ಪ್ರಯತ್ನಃ ॥ 7॥

ಅಸ್ತ್ವಮ್ಬ ತ್ವಯ್ಯನೇಕೈರಶುಭಶುಭತರೈಃ ಕಲ್ಪಿತೈರಮ್ಬ ತರ್ಕೈ-
     ರದ್ಯಾಹಂ ಮನ್ದಬುದ್ಧಿಃ ಸರಸಿಜನಿಲಯೇ ಸಾಪರಾಧೋಽಸ್ಮಿ ಜಾತಃ ।
ತಸ್ಮಾತ್ತ್ವತ್ಪಾದಪದ್ಮದ್ವಯನಮಿತಶಿರಾ ಪ್ರಾರ್ಥಯಾಮ್ಯೇತದೇವ
     ಕ್ಷನ್ತವ್ಯೋ ಮೇಽಪರಾಧೋ ಹರಿಹರದಯಿತೇ ಭೇದಬುದ್ಧಿರ್ನ ಮೇಽಸ್ತಿ ॥ 8॥

ಆರ್ಯಾದುರ್ಗಾಷ್ಟಕಮಿದಮನನ್ತಕವಿನಾ ಕೃತಮ್ ।
ತವ ಪ್ರೀತಿಕರಂ ಭೂಯಾದಿತ್ಯಭ್ಯರ್ಥನಮಮ್ಬಿಕೇ ॥ 9॥

ವೀಳ್ಯದೆಲೆಯ ಮಹತ್ವ

"ವೀಳ್ಯದೆಲೆಯ ಮಹತ್ವ"🌱🌱🌱🌱🌱🌱

೧. ವೀಳ್ಯದೆಲೆ ತುದಿಯಲ್ಲಿ - ಲಕ್ಷ್ಮೀವಾಸ..
೨. ವೀಳ್ಯದೆಲೆ ಬಲಭಾಗದಲ್ಲಿ ಬ್ರಹ್ಮ ದೇವರ ವಾಸ..
೩. ವೀಳ್ಯದೆಲೆ ಮಧ್ಯದಲ್ಲಿ ಸರಸ್ವತೀ ದೇವಿ..
೪. ವೀಳ್ಯದೆಲೆ ಎಡಭಾಗದಲ್ಲಿ ಪಾರ್ವತೀ ದೇವಿ..
೫. ವೀಳ್ಯದೆಲೆ ಸಣ್ಣದಂಟಿನಲ್ಲಿ ಮಹಾವಿಷ್ಣುವಿನ ವಾಸ..
೬. ವೀಳ್ಯದೆಲೆ ಹಿಂಭಾಗದಲ್ಲಿ ಚಂದ್ರದೇವತೆ ವಾಸ..
೭. ವೀಳ್ಯದೆಲೆ ಎಲ್ಲಾ ಮೂಲೆಗಳಲ್ಲಿ ಪರಮೇಶ್ವರನ ವಾಸ.
೮. ವೀಳ್ಯದೆಲೆಯ ಬುಡದಲ್ಲಿ ಮೃತ್ಯುದೇವತೆಯ ವಾಸ..
(ಈ ಕಾರಣಕ್ಕೆ ತಾಂಬೂಲ ಹಾಕಿಕೊಳ್ಳುವಾಗ ತುದಿ ಭಾಗ ತೆಗೆದು ಹಾಕಿಕೊಳ್ಳುವುದು)
೯. ವೀಳ್ಯದೆಲೆ ತೊಟ್ಟಿನಲ್ಲಿ ಅಹಂಕಾರ ದೇವತೆ ಹಾಗೂ ದಾರಿದ್ರ್ಯಲಕ್ಷ್ಮೀ ಇರುತ್ತಾರೆ..
(ಆದುದರಿಂದನೇ ವೀಳ್ಯದೆಲೆ ಹಾಕಿಕೊಳ್ಳುವವರು ತೊಟ್ಟನ್ನು ಮುರಿದು ಹಾಕುತ್ತಾರೆ..,
ಅಹಂಕಾರ ಹಾಗೂ ದಾರಿದ್ರ್ಯಲಕ್ಷ್ಮೀ ಬರಬಾರದೆಂಬ ಅರ್ಥ..)
೧೦. ವೀಳ್ಯದೆಲೆ ಮಧ್ಯಭಾಗದ ನಂತರ ಮನ್ಮಥನ ವಾಸ..,

ಈ ಎಲ್ಲಾ ದೇವರುಗಳು ಇರೋದ್ರಿಂದಾನೆ, ವೀಳ್ಯದೆಲೆ ತಾಂಬೂಲಕ್ಕೆ ಇಷ್ಟು ಮಹತ್ವ..
ಪೂರ್ವ ಅಥವಾ ಉತ್ತರ ದಿಕ್ಕಿಗೆ ತುದಿ ಬರುವ ತರಹ ಇಟ್ಟು ದೇವರಿಗೆ ನೈವೇದ್ಯ ಮಾಡಬೇಕು..
ಯಾರ ಮನೆಯಲ್ಲೇ ತಾಂಬೂಲ ಕೊಟ್ಟರೂ, ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ, ಆ ನಂತರ ಉಪಯೋಗಿಸಬೇಕು..
ಮಂಗಳವಾರ, ಶುಕ್ರವಾರಗಳಂದು ಯಾವುದೇ ಕಾರಣಕ್ಕೂ ವೀಳ್ಯದೆಲೆ ಹೊರಗೆ ಹಾಕಬಾರದು..
ಹಸಿರಾಗಿರುವ ಮತ್ತು ಅಂದವಾಗಿ ಹಸ್ತದ ಆಕಾರ ಇರುವ ಎಳೆಯ ವೀಳ್ಯದೆಲೆ ನೈವೇದ್ಯ ಮಾಡಬೇಕು ಮತ್ತು ತಾಂಬೂಲ ಕೊಡಬೇಕು..


ಸೂರ್ಯ ದ್ವಾದಶ ನಾಮಸ್ತೋತ್ರಂ

ಶುಭ ಅರುಣೋದಯ,ಆದಿತ್ಯಃ ಪ್ರಥಮಂ ನಾಮ ದ್ವಿತೀಯಂ ತು ದಿವಾಕರಃ।
ತೃತೀಯಂ ಭಾಸ್ಕರಃ ಪ್ರೋಕ್ತಂ ಚತುರ್ಥಂ ತು ಪ್ರಭಾಕರಃ॥
ಪಂಚಮಂ ತು ಸಹಸ್ರಾಂಶುಃ ಷಷ್ಠಂ ತ್ರೈಲೋಕ್ಯಲೋಚನಃ।
ಸಪ್ತಮಂ ಹರಿದಶ್ವಶ್ಚ ಅಷ್ಟಮಂ ಚ ವಿಭಾವಸುಃ॥
ನವಮಂ ದಿನಕರಂ ಪ್ರೋಕ್ತೋ ದಶಮಂ ದ್ವಾದಶಾತ್ಮಕಃ। ಏಕಾದಶಂ ತ್ರಯೋಮೂರ್ತಿಃ ದ್ವಾದಶಂ ಸೂರ್ಯ ಏವ ಚ॥
ಇತಿ ಸೂರ್ಯದ್ವಾದಶನಾಮಸ್ತೋತ್ರಂ ಸಂಪೂರ್ಣಂ||
🙏🙏🙏

ಸಂಕ್ರಾಂತಿ ಹಬ್ಬದ ಶುಭಾಶಯಗಳು - ಎಳ್ಳು ಬೆಲ್ಲದ ಮಹತ್ವ

ಎಳ್ಳು ಬೆಲ್ಲದ ಮಹತ್ವ !!!
ಉತ್ತರಾಯಣ ಪರ್ವ ಕಾಲದಲ್ಲಿ ಸಾಮಾನ್ಯವಾಗಿ ಲಕ್ಷ್ಮೀ ಪೂಜೆಯನ್ನ ಮಾಡ್ತಾರೆ. ಆಕೆಯನ್ನ ಇಕ್ಷು ದಂಡಿ ಅಂತಾರೆ. ಅಂದರೆ ಕಬ್ಬನ್ನ ಹಿಡಿದಿರುವವವಳು ಅಂತ. ಅಂಥಾ ಲಕ್ಷ್ಮಿಯನ್ನ ಆರಾಧಿಸಬೇಕು. ಲಕ್ಷ್ಮೀ ಅಂದ್ರೆ " ಲಕ್ಷ್ಯತಿ ಸರ್ವಂ ಸದಾ " ಅಂತ. ಯಾರು ಸರ್ವ ಕಾಲಕ್ಕೂ ಸರ್ವವನ್ನೂ ನೋಡುತ್ತಾಳೋ ಅವಳೇ ಲಕ್ಷ್ಮಿ. ಎಲ್ಲವನ್ನೂ ನೋಡುವವಳು ಅಂದರೆ ಸರ್ವ ಸಮಾನತೆ ಅಂತ. ಅಂದಹಾಗೆ ನಾವುಗಳು ಎಳ್ಳು ಬೆಲ್ಲ ಹಂಚೋದೇ ಈ ಕಾರಣಕ್ಕೆ. ಎಳ್ಳಿನಲ್ಲಿ ಲಕ್ಷ್ಮಿ ವಾಸವಿರ್ತಾಳೆ. ಎಳ್ಳನ್ನ ಹಂಚುವುದರಿಂದ ಸಂಪತ್ತನ್ನ ಹಂಚಿದಂತಾಗತ್ತೆ. ಲಕ್ಷ್ಮಿ ಎಲ್ಲಿಯೂ ನಿಲ್ಲುವವಳಲ್ಲ. ಹಾಗಾಗಿ ಆಕೆಯನ್ನ ಎಲ್ಲರಿಗೂ ಸಮರ್ಪಿಸಿ ಇತರರಲ್ಲಿ ಸಂಪತ್ ವೃದ್ಧಿ ಆಗಲಿ ಅಂತ ಆಶಿಸುವ ಕ್ರಮ ಇದು. ಮತ್ತು ಆಕೆ ಇಕ್ಷುದಂಡಿ, ಇಕ್ಷು ಅಂದ್ರೆ ಕಬ್ಬು ಕಬ್ಬಿನಿಂದಲೇ ಬೆಲ್ಲ ಬಂದದ್ದು ಹಾಗಾಗಿ ಎಳ್ಳು-ಬೆಲ್ಲ ಸೇರಿಸಿ ಹಂಚುವ ಕ್ರಮ ನಮ್ಮಲ್ಲಿ ಬಂತು.
ನಮ್ಮ ಹಿರಿಯರು ಊಟ ಮುಗಿಸಿ ಬೆಲ್ಲ ಬಾಯಿಗಿಡುವುದು ಸುಮ್ಮನಲ್ಲ!
ಸಾಮಾನ್ಯವಾಗಿ ಜನರು ಊಟವಾದ ಮೇಲೆ ಬೆಲ್ಲ ತಿನ್ನುತ್ತಾರೆ. ಆದರೆ ಅದೇಕೆ ಎನ್ನುವುದು ಹಲವರಿಗೆ ಗೊತ್ತಿಲ್ಲ. ಚಳಿಗಾಲದಲ್ಲಿ ಬೆಲ್ಲ ತಿಂದರೆ ವಿಟಮಿನ್ ಗಳು ಮತ್ತು ಲವಣಗಳು ಹೊಟ್ಟೆ ಸೇರುತ್ತವೆ. ಜೊತೆಯಲ್ಲಿಯೇ ನಿರೋಧಕ ಶಕ್ತಿಯನ್ನು ಸೃಷ್ಟಿಸಿ ದೇಹವನ್ನು ಬೆಚ್ಚಗಿಡುತ್ತದೆ. ಶೀತ ಮತ್ತು ಕೆಮ್ಮು ಇದ್ದರೆ ನಿವಾರಿಸುವುದಲ್ಲದೆ, ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡುತ್ತದೆ. ಇದೇ ಕಾರಣದಿಂದ ಈ ಸಹಜ ಸಿಹಿ ಭಾರತದಲ್ಲಿ ಅತೀ ಜನಪ್ರಿಯ. ಇಲ್ಲಿ ಬೆಲ್ಲದ 15 ಲಾಭಗಳನ್ನು ವಿವರಿಸಿದ್ದೇವೆ.
1. ಮಲಬದ್ಧತೆಯಿಂದ ರಕ್ಷಣೆ: ಬೆಲ್ಲ ದೇಹದಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಎನ್‌ಜೈಮ್‌ಗಳನ್ನು ಸಕ್ರಿಯಗೊಳಿಸುತ್ತದೆ. ಜಠರದ ಚಲನೆಗೆ ನೆರವಾಗಿ ಮಲಬದ್ಧತೆಯಿಂದ ರಕ್ಷಿಸುತ್ತದೆ.
2. ಮೂತ್ರಪಿಂಡಕ್ಕೆ ನೆರವು: ಬೆಲ್ಲವು ಮೂತ್ರಪಿಂಡದಲ್ಲಿರುವ ವಿಷಕಾರಿ ರಾಸಾಯನಿಕಗಳನ್ನು ಹೊರ ಹಾಕಲು ನೆರವಾಗುತ್ತದೆ. ದೇಹದಿಂದ ಪರಿಣಾಮಕಾರಿಯಾಗಿ ವಿಷನಿವಾರಿಸಬೇಕೆಂದಲ್ಲಿ ಬೆಲ್ಲ ತಿನ್ನಿ.
3. ಜ್ವರದ ಚಿಹ್ನೆಗಳಿಗೆ ಚಿಕಿತ್ಸೆ: ಶೀತ ಮತ್ತು ಕಫ ಇದ್ದಾಗ ಬೆಲ್ಲ ತಿನ್ನಬೇಕು. ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಿರಿ ಅಥವಾ ಚಹಾಗೆ ಸಕ್ಕರೆ ಬದಲು ಬೆಲ್ಲ ಹಾಕಬಹುದು.
4. ರಕ್ತ ಶುದ್ಧೀಕರಣ: ಬೆಲ್ಲದ ಅತೀ ಪ್ರಸಿದ್ಧ ಲಾಭವೆಂದರೆ ರಕ್ತ ಶುದ್ಧೀಕರಣ. ನಿತ್ಯವೂ ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತ ಶುದ್ಧವಾಗಿ ದೇಹವನ್ನು ಆರೋಗ್ಯವಾಗಿಡುತ್ತದೆ.
5. ನಿರೋಧಕ ಶಕ್ತಿಗೆ ಒತ್ತು: ಬೆಲ್ಲದಲ್ಲಿ ಹಲವು ಆಂಟಿ ಆಕ್ಸಿಡಂಟ್‌ಗಳು ಮತ್ತು ಲವಣಗಳಾದ ಸತು ಮತ್ತು ಸೆಲೆನಿಯಂ ಇವೆ. ಇವು ಸ್ವತಂತ್ರ ಕಣಗಳಿಗೆ ಹಾನಿಯಾಗದಂತೆ ನೆರವಾಗುತ್ತದೆ. ಸೋಂಕುಗಳ ವಿರುದ್ಧವೂ ನೆರವಾಗುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಏರಿಸಲೂ ಬೆಲ್ಲ ನೆರವಾಗುತ್ತದೆ.
6. ದೇಹ ಸ್ವಚ್ಛಗೊಳಿಸುವುದು: ಬೆಲ್ಲ ಒಂದು ಅತೀ ಸಹಜವಾದ ದೇಹ ಸ್ವಚ್ಛಗೊಳಿಸುವ ಸಾಧನ. ಹೀಗಾಗಿ ಬೆಲ್ಲ ಸೇವಿಸುವುದು ದೇಹದಿಂದ ಅನಗತ್ಯ ಕಣಗಳನ್ನು ನಿವಾರಿಸುತ್ತದೆ. ಶ್ವಾಸಕೋಶ, ಶ್ವಾಸನಾಳ, ಕರುಳು, ಹೊಟ್ಟೆ ಮತ್ತು ಅನ್ನನಾಳವನ್ನು ಸ್ವಚ್ಛಗೊಳಿಸುತ್ತದೆ. ಅತೀ ಮಾಲಿನ್ಯವಿರುವ ಜಾಗದಲ್ಲಿ ಕೆಲಸ ಮಾಡುವವರು ಬೆಲ್ಲ ತಿನ್ನುವುದು ಉತ್ತಮ.
7. ಋತುಸ್ರಾವದ ನೋವು: ಬೆಲ್ಲ ತಿನ್ನುವುದರಿಂದ ಹಲವು ಪೌಷ್ಠಿಕಾಂಶಗಳನ್ನು ದೇಹಕ್ಕೆ ನೀಡುವ ಕಾರಣ ಋತುಸ್ರಾವದ ನೋವಿಗೆ ಇದು ಉಪಶಮನ. ಋತುಸ್ರಾವದ ಸಮಯದಲ್ಲಿ ಮನೋಸ್ಥಿತಿಯಲ್ಲಿ ಬದಲಾವಣೆಯಾಗುತ್ತಿದ್ದಲ್ಲಿ ಬೆಲ್ಲ ತಿನ್ನಿ. ಇದು ಪಿಎಂಎಸ್ ಚಿಹ್ನೆಗಳ ಜೊತೆಗೆ ಹೋರಾಡಿ ಎಂಡೋರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಎಂಡೋರ್ಫಿನ್‌ಗಳು ದೇಹಕ್ಕೆ ಆರಾಮ ಕೊಡುತ್ತದೆ.
8. ಅನೀಮಿಯದಿಂದ ರಕ್ಷಣೆ: ಬೆಲ್ಲದಲ್ಲಿ ಕಬ್ಬಿಣ ಮತ್ತು ಫೊಲೇಟ್ ಇರುವ ಕಾರಣ ರಕ್ತದ ಕೋಶಗಳ ಪ್ರಮಾಣವನ್ನು ಸಾಮಾನ್ಯ ಸ್ಥಿತಿಯಲ್ಲಿ ಇಡುತ್ತದೆ. ಗರ್ಭಿಣಿ ಮಹಿಳೆಯರಿಗೆ ಉತ್ತಮ.
9. ಕರುಳಿನ ಆರೋಗ್ಯ: ಬೆಲ್ಲದಲ್ಲಿ ಮೆಗ್ನೇಶಿಯಂ ಹೆಚ್ಚಿರುವ ಕಾರಣ ಕರುಳಿನ ಆರೋಗ್ಯಕ್ಕೆ ಉತ್ತಮ. 10 ಗ್ರಾಂ ಬೆಲ್ಲದಲ್ಲಿ 16 ಮಿಲಿಗ್ರಾಂ ಮೆಗ್ನೇಶಿಯಂ ಇರುತ್ತದೆ.
10. ಹೊಟ್ಟೆಗೆ ತಂಪು : ಬೆಲ್ಲ ಸಾಮಾನ್ಯ ದೇಹದ ಉಷ್ಣತೆ ಕಾಪಿಡಲು ನೆರವಾಗುತ್ತದೆ. ಬೆಲ್ಲದ ತಂಪು ನೀರು ಕುಡಿಯುವುದು ಬೇಸಿಗೆಗೆ ಉತ್ತಮ.
11. ರಕ್ತದೊತ್ತಡ ನಿಯಂತ್ರಣ: ಬೆಲ್ಲದಲ್ಲಿ ಪೊಟಾಶಿಯಂ ಮತ್ತು ಸೋಡಿಯಂ ಇರುವ ಕಾರಣ ದೇಹದಲ್ಲಿ ಆಮ್ಲೀಯ ತತ್ವಗಳನ್ನು ನಿಭಾಯಿಸುತ್ತದೆ. ಹೀಗಾಗಿ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
12. ಶ್ವಾಸಕೋಶದ ಸಮಸ್ಯೆ: ಬೆಲ್ಲವನ್ನು ನಿತ್ಯವೂ ಸೇವಿಸುವುದರಿಂದ ಆಸ್ತಮಾ, ಬ್ರೋನ್ಷಿಟಿಸ್ ಸಮಸ್ಯೆ ನಿವಾರಣೆಯಾಗಲಿದೆ. ಎಳ್ಳು ಬೆರೆಸಿ ಜೊತೆಗೆ ಸೇವಿಸಿದರೆ ಶ್ವಾಸಕೋಶಕ್ಕೆ ಉತ್ತಮ.
13. ಸಂಧಿ ನೋವು: ನಿಮಗೆ ಸಂಧಿ ನೋವಿದ್ದರೆ ಬೆಲ್ಲ ಉತ್ತಮ ನೋವು ನಿವಾರಕ. ಶುಂಠಿ ಜೊತೆ ಸೇವಿಸಿ ಬೆಲ್ಲ ತಿನ್ನ ಬಹುದು. ಮೂಳೆಗಳಿಗೂ ಇದು ಉತ್ತಮ.
14. ತೂಕ ನಷ್ಟ: ತೂಕ ಇಳಿಸಲು ಬೆಲ್ಲ ಉತ್ತಮ ಹಾದಿ. ಪೊಟಾಶಿಯಂ ಹೆಚ್ಚಾಗಿರುವ ಕಾರಣ ಎಲೆಕ್ಟ್ರೊಲೈಟ್ ಗಳನ್ನು ಸಮತೋಲನ ಮಾಡಿ ಚಯಾಪಚಯ ಚೆನ್ನಾಗಿರಲು ಬೆಲ್ಲ ನೆರವಾಗುತ್ತದೆ. ಹೀಗಾಗಿ ತೂಕ ಇಳಿಸುವಲ್ಲಿ ಉತ್ತಮ.
15. ಶಕ್ತಿಯ ಮೂಲ: ಸಕ್ಕರೆ ಕಾರ್ಬೋಹೈಡ್ರೇಟ್ ದೇಹಕ್ಕೆ ಕೊಟ್ಟರೆ, ಬೆಲ್ಲ ದೇಹಕ್ಕೆ ಧೀರ್ಘ ಕಾಲದ ಶಕ್ತಿ ಕೊಡುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಸುವುದಿಲ್ಲ. ಸುಸ್ತು ಮತ್ತು ನಿಶ್ಶಕ್ತಿ ಇರುವವರಿಗೂ ಉತ್ತಮ ಔಷಧ.

 ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)
🙏 HARiOM Tatsat

ಕರ್ತವ್ಯ ನಿರತ ಸ್ಥಳದಲ್ಲಿ ಸಂತೋಷದ ಬದುಕಿನ ಸೂತ್ರಗಳು

ಕರ್ತವ್ಯ ನಿರತ ಸ್ಥಳದಲ್ಲಿ ಸಂತೋಷದ ಬದುಕಿನ ಸೂತ್ರಗಳು 

1 ) ಎಲ್ಲರನ್ನೂ ಗೌರವಿಸಿ ಆದರೆ ಯಾರನ್ನೋ  ನಂಬಿ ಕರ್ತವ್ಯ ನಿರ್ವಹಿಸಬೇಡಿ 

2 ) ಕಚೇರಿಯ ವಿಷಯಗಳನ್ನು ಮನೆಗೆ ತರಬೇಡಿ ಹಾಗೆಯೇ ಮನೆಯ ವಿಷಯಗಳನ್ನೂ ಕೂಡ ಕಚೇರಿಗೆ ತರಬೇಡಿ 

3) ಕರ್ತವ್ಯದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಹೋಗಿ  ಹಾಗೆಯೇ ಸರಿಯಾದ ಸಮಯಕ್ಕೆ ಕೆಲಸ ಮುಗಿಸಿ  ಹೊರಡಿ 

4) ಕರ್ತವ್ಯ ನಿರತ ಸ್ಥಳದಲ್ಲಿ ಯಾವತ್ತೂ ಸಂಬಂಧಗಳನ್ನು  ಬೆಳಸಬೇಡಿ  ಇದು ಯಾವತ್ತಿಗೂ ಬೆನ್ನ ಹಿಂದಿನ    ಬೆ0ಕಿ (BACKFIRE )🌶

5) ಯಾರಿಂದಲೂ ಏನನ್ನೂ ನಿರೀಕ್ಷಿಸ ಬೇಡಿ. ಒಂದು ವೇಳೆ ಕಚೇರಿಯಲ್ಲಿ ಯಾರದರೂ ಸಹಾಯ ಮಾಡಿದರೆ ಧನ್ಯವಾದ  ಹೇಳಿ, ಇಲ್ಲದಿದ್ದರೆ ನನಗೆ ಕಲಿಯಲು ಅವಕಾಶ ಸಿಕ್ಕಿದೆ ಎಂದು ಭಾವಿಸಿ.

6) ಸ್ಥಾನ, ಮಾನ ಮತ್ತು ಬಡ್ತಿಗಾಗಿ ಎಂದೂ ಅವಸರ ಮಾಡ್ಬೇಡಿ, ನಿಮಗೆ ಬಡ್ತಿಯಾದರೆ ಸಂತೋಷಪಡಿ. ಇಲ್ಲವಾದಲ್ಲಿ ಚಿಂತೆಯಿಲ್ಲ   ನಿಮ್ಮ ಜ್ಞಾನ, ಕೌಶಲ್ಯ, ವಿನಯವಂತಿಕೆ ಹಾಗೂ ನೀವು ಹೊOದಿರುವ  ಹುದ್ದೆಯನ್ನು ಸಮಾಜ ಗೌರವಿಸುತ್ತದೆ   ಹಾಗೂ ನೆನಪಿಸಿಕೊಳ್ಳುತ್ತದೆ.

7) ಕಚೇರಿಯ ವಿದ್ಯಾಮಾನಗಳ ಬಗ್ಗೆ ತಲೆ  ಕೆಡಿಸಿಕೊಳ್ಳಬೇಡಿ. ನಿಮಗೆ ನಿಮ್ಮ ಜೀವನದಲ್ಲಿ ಮಾಡುವ ಅದೆಷ್ಟೋ ಕೇಲಸಗಳಿವೆ.

8) ನಿಮ್ಮ ಸ್ಥಾನ, ಮಾನ ಮತ್ತು ವೇತನದ ಬಗ್ಗೆ ಅಹಂಕಾರ ಪಡಬೇಡಿ. ನೀವು ವೇತನ ಪಡೆದು ಸೇವೆ ಸಲ್ಲಿಸುವವರು. ನಿಮ್ಮ ಸ್ವಂತದ್ದನ್ನು  ಖರ್ಚುಮಾಡಿ ಸಂತೋಷಪಡಿ.

9)  ಜನರು ನಿಮ್ಮನ್ನು ಹೇಗೆ ಗೌರವಿಸುತ್ತಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ವಿನಯವಂತರಾಗಿರಿ. ನೀವು ಎಂದಿಗೂ, ಯಾರಿಗೂ ಅನಿವಾರ್ಯವಲ್ಲ  ಎಂಬುದನ್ನು ನೆನಪಿಡಿ.

10) ಕೊನೆಯದಾಗಿ ನಮಗೆ ಬೇಕಿರುವುದು ಕುಟುOಬ, ಸ್ನೇಹಿತರು, ಮನೆ ಹಾಗೂ ಮನಶಾಂತಿ ಮಾತ್ರ.

ಯಕ್ಷಗಾನ

ಯಕ್ಷಗಾನ-ಭಾಗ-೦೧

ಪೌರಾಣಿಕ ಮತ್ತು ಐತಿಹಾಸಿಕ  ಹಿನ್ನೆಲೆ.
ನಾಟ್ಯಶಾಸ್ತ್ರ ಎಂದಕೂಡಲೇ ಭರತ ಮುನಿ-ಅಭಿನವಗುಪ್ತರ ವ್ಯಕ್ತಿತ್ವದ ಪರಿಚಯ ಮತ್ತು ನಾಟ್ಯಶಾಸ್ತ್ರ ರಚಯಿತೃ ಶಿವಾನುಭೂತಿ ಸಹಜವೇ. ಹಲವಾರು ಗಣ್ಯರು ಈ ಶಾಸ್ತ್ರವನ್ನು ಆಸ್ತೀಕ ಜನತೆಗಳಿಗೆ ತಲುಪುವಂತೆ ಮಾಡಿರುವ ಪ್ರಯತ್ನ ಹೇಳಲಸದಳ.ಈ ಸಣ್ಣ ಬರಹವನ್ನು ನನ್ನ ಪರಿಶ್ರಮದ ವ್ಯಾಪ್ತಿಯಲ್ಲಿ ವಿಸ್ತೀರ್ಣಮಾಡುವ ಸಾಹಸ ಕಾರ್ಯಕ್ಕೆ ನನ್ನನ್ನು ಪ್ರೋತ್ಸಾಹಿಸಿದ ಸನ್ನಿವೇಶದ ಸ್ಮರಣೆ ಮುಖ್ಯ. ಎಂದಿನಂತೆ ಬನ್ನಂಜೆಯವರು ತಮಗಿರುವ ಸಮಯದ ಕೊರತೆಯಿಂದಲೋ ಅಥವಾ ಅಭಿಮಾನದ ಹುಮ್ಮಸ್ಸಿನಿಂದಲೋ ಯಕ್ಷಗಾನ ಸಂಬಂಧ ಕಾಲ ಹಾಗೂ ಕರ್ತೃ ಸಂಬಂಧ ನಿರ್ಣಯ ಮಾಡುವಲ್ಲಿ ಸ್ವಲ್ಪವೇ ಎಡವಿದ್ದಾರೆ.  ಈ ಸನ್ನಿವೇಶದಿಂದ  ನಾನು ಪ್ರಚೋದಿತನಾಗಿರುವದು ಸತ್ಯದರ್ಶನ ಹಾಗೂ ಸತ್ಯನಿಷ್ಠೆಯಿಂದಲೇ ಹೊರತು ಬನ್ನಂಜೆಯವರಲ್ಲಿ ನನ್ನ ವೈಯಕ್ತಿಕ ದ್ವೇಷವೇನಿಲ್ಲ ಎಂಬುವದನ್ನು ಸ್ಪಷ್ಟಪಡಿಸುತ್ತೇನೆ. 

ಈ ದಿಕ್ಕಿನಲ್ಲಿ ಸ್ವಲ್ಪವಾದರೂ ನನ್ನ ತಿಳುವಳಿಕೆಯು ಸಹಾಯವಾಗುತ್ತದೆ ಎನ್ನುವದಕ್ಕೆ ನನ್ನ ಗುರುಕಲ್ಪದ ಬೃಹದಾಶೀರ್ವಾದವೇ ಎಂಬುದನ್ನು ನಾನು ಯಾವಕಾಲಕ್ಕೂ ಮರೆಯುವಂತಿಲ್ಲ.

ಯಕ್ಷಗಾನದ ಕಾಲ ಇದಮಿತ್ಥಂ ಎಂಬುದಾಗಿ ಹೇಳಲು ಸಾಧ್ಯವೇ ಇಲ್ಲವಾದರೂ ಇದಕ್ಕೆ   ಪೌರಾಣಿಕ ಮತ್ತು ಐತಿಹಾಸಿಕ  ಹಿನ್ನೆಲೆ ಇರುವದನ್ನು ನಮ್ಮ ಸನಾತನ ಶಾಸ್ತ್ರಗ್ರಂಥಗಳಲ್ಲಿ , ಪುರಾತನ ಕಾವ್ಯಗಳಲ್ಲಿ , ಸಂಗೀತ ಶಾಸ್ತ್ರಗಳಲ್ಲಿ ಕಂಡುಕೊಳ್ಳಬಹುದು.ಸನಾತನ ಶಾಸ್ತ್ರಗ್ರಂಥಗಳಲ್ಲಿ ಯಕ್ಷಗಾನ ಎಂಬ ಹೆಸರು ಕಂಡುಬರುವದಿಲ್ಲ ಎಂಬ ಒಂದೇ ಕಾರಣಕ್ಕೆ ಯಕ್ಷಗಾನವು ಅರ್ವಾಚೀನ  ಕಲೆ ಎಂಬುದಾಗಿ ಹೇಳ ಬರುವದಿಲ್ಲ.ಯಕ್ಷಗಾನ ಸನಾತನವಾಗಿಲ್ಲದಿದ್ದರೇ ಇಂದಿನ ದಿನಕ್ಕೆ ಅದು ಇಷ್ಟೊಂದು ಪ್ರಸಿದ್ಧಿಯಾಗಲೀ ಅಥವಾ ಉತ್ಕೃಷ್ಟ ಮನೋರಂಜನೆಯನ್ನು ಕೊಡುವಂಥ  ಕಲೆಯಾಗಿ ಉಳಿಯುತ್ತಿರಲಿಲ್ಲ. ಈ ಕಲೆಯಲ್ಲಿ ಸನಾತನವಾದ ದಿವ್ಯತೆ ಇರುವದರಿಂದಲೇ ಇಂದಿಗೂ ಇದು ಜನರನ್ನು ತನ್ನೆಡೆಗೆ ಮೊದಲಿಗಿಂತಲೂ ಹೆಚ್ಚಿನದಾಗಿ ಕಲಾರಾಧಕರನ್ನು ಸೆಳೆದುಕೊಳ್ಳುತ್ತಿದೆ. ಯಕ್ಷಗಾನ ಎಂಬ ಬರಹದ ಈ ಸಂಚಿಕೆಯಲ್ಲಿ ನಾನು ಈವರೆವಿಗೂ ಉಪಲಬ್ಧವಿರುವ ಯಾವುದೇ ಅರ್ವಾಚೀನ ಗ್ರಂಥಗಳ ವಿಷಯವನ್ನು  ಉಲ್ಲೇಖ ಮಾಡದೇ , ಪ್ರಸ್ತುತ ಯಕ್ಷಗಾನ ಕಲೆಯ ಕುರಿತಾದ ಲಕ್ಷಣಗಳನ್ನು ಸನಾತನ ಶಾಸ್ತ್ರಗ್ರಂಥಗಳ ಸಂಬಂಧ ವಿಷಯವನ್ನು ಸಂಯೋಜಿಸಿ ಮುಂದಿನ ಭಾಗಗಳಲ್ಲಿ ಈ ಯಕ್ಷಗಾನ ಎಂಬ ಕಲೆಯು ದೇವಗಂಧರ್ವಕಾಲದಿಂದಲೂ ಪಾರಂಪರಿಕವಾಗಿ ಹಾಗೂ ಶಾಸ್ತ್ರೀಯವಾಗೇ ನಡೆದುಕೊಂಡು ಬಂದಿರುವ   ದಿವ್ಯಕಲಾವಿದ್ಯೆ ಎಂಬುವದನ್ನು ತಿಳಿಸುವ ಪ್ರಯತ್ನ ಮಾಡುತ್ತೇನೆ.

ಮೊದಲಿಗೆ ಯಕ್ಷಗಾನ ಎಂಬುದರ ನಿರ್ವಚನದ ಮೂಲಕ ಪ್ರಸಿದ್ಧಾರ್ಥ ಮತ್ತು ಯಥಾರ್ಥವನ್ನು ತಿಳಿದುಕೊಳ್ಳೋಣ.

ಯಕ್ಷಗಾನ:- ಯಕ್ಷ-ಗಾನ. ಯಕ್ಷರ ಹಾಡುಗಾರಿಕೆ.

ಗಾನ:- ಎಂದರೇನು ?

ಸಂಗೀತ ದರ್ಪಣ :-

ಗಾನಂಹಿವೈದಿಕಲೌಕಿಕಭೇದಾತ್ದ್ವಿವಿಧಮ್|ತತ್ರವೈದಿಕಗಾನನ್ತುಮುಕ್ತಿಪ್ರದಂಅನ್ಯತೋಲ್ಲೋಕರಞ್ಜನಕರಮ್|

ಗಾನವು ವೈದೀಕ ಮತ್ತು ಲೌಕಿಕ ಎಂಬುದಾಗಿ ಎರಡು ವಿಧ.ವೈದೀಕಗಾನವು ಮುಕ್ತಿಪ್ರದವೂ ಲೌಕಿಕ ಗಾನವು ಮನೋರಂಜನೆಯನ್ನೂ ಕೊಡುವಂಥದ್ದಾಗಿದೆ. ಮನೋರಂಜನೆಯೇ ಯಕ್ಷಗಾನದ ಮುಖ್ಯಲಕ್ಷಣ.ಹೇಗೆ ?   

ರಾಗರಾಗಿಣೀನಾಂವಿಶೇಷವಿವರಣನ್ತುತತ್ತಚ್ಛಬ್ದೇಗಾನಸ್ಯಅನ್ಯದ್ವಿವರಣಂಗೀತಶಬ್ದೇಚದರ್ಶನೀಯಮ್ ||

ಭಾವೋದ್ರಿಕ್ತರಾಗಿ , ಹಾವಭಾವವಿಶೇಷಣಗಳನ್ನೂ , ಶಬ್ದಗಳ ಸಾಹಿತ್ಯಸಂಬಂಧ ವಿವರಣೆಗಳನ್ನೂ ,ನಟನೆಯಮೂಲಕ ಅವುಗಳ ಭಾವಾರ್ಥವನ್ನೂ ಒಡಗೂಡಿಸಿಕೊಂಡು ಹೇಳುವದೇ ಗಾನ. ಗಾನ ಎಂದರೇ  ಕೇವಲ ಹಾಡುಗಾರಿಕೆಯಲ್ಲ.

ಹಾಗಿದ್ದರೇ ಯಕ್ಷಗಾನಕ್ಕೂ  ಮನರಂಜನೆಗೂ ಹೇಗೆ ಸಂಬಂಧ ?  

ಯಕ್ಷ ಎಂದರೇ ಯಾರು ? 

ಮಹಾಭಾರತ : - ಆದಿಪರ್ವ  

*ಪುರುಷಶ್ಚಾಪ್ರಮೇಯಾತ್ಮಾ ಯಂ ಸರ್ವಮೃಷಯೋ ವಿದುಃ | ವಿಶ್ವೇದೇವಾಸ್ತಥಾದಿತ್ಯಾ ವಸವೋಽಥಾಶ್ವಿನಾವಪಿ || ೦೧.೩೨ ||

ಯಕ್ಷಾಃ ಸಾಧ್ಯಾಃ ಪಿಶಾಚಾಶ್ಚ ಗುಹ್ಯಕಾಃ ಪಿತರಸ್ತಥಾ |  ತತಃ ಪ್ರಸೂತಾ ವಿದ್ವಾಂಸಃ ಶಿಷ್ಟಾ ಬ್ರಹ್ಮರ್ಷಯೋಽಮಲಾಃ* ||೦೧.೩೩ ||

ಯಾರನ್ನು  ಮಹರ್ಷಿಗಳು ಅಪ್ರಮೇಯನೆಂದೂ ಮಾಹಾಪುರುಷನೆಂದೂ ತಿಳಿದಿರುವರೋ ಅಂಥ ಮಹಾವಿಷ್ಣುವನ್ನು ಅನುಸರಿಸಿ ವಿಶ್ವೇದೇವತೆಗಳು , ಅಷ್ಟಾವಸುಗಳು ,ದ್ವಾದಶಾದಿತ್ಯರೂ ಆಶ್ವಿನೀ ದೇವತೆಗಳು ,ಯಕ್ಷರೂ ,ಸಿದ್ಧರೂ(ಸಾಧ್ಯರೂ) , ಪಿಶಾಚರೂ ಗುಹ್ಯಕರೂ ,ಪಿತೃದೇವತೆಗಳು ಹುಟ್ಟಿದರು.

*ರಾಕ್ಷಸಾಸ್ತು ಪುಲಸ್ತ್ಯಸ್ಯ ವಾನರಾಃ ಕಿಂನರಾಸ್ತಥಾ* ||೬೦-೦೭||  .

ಪುಲಸ್ತ್ಯನಿಗೆ ರಾಕ್ಷಸರೂ , ವಾನರರೂ ಮತ್ತು ಯಕ್ಷಕಿನ್ನರರೂ ಹುಟ್ಟಿದರು.

ಸಭಾಪರ್ವದಲ್ಲಿ ನಾರದರಿಂದ ಕುಬೇರನ ಸಭಾವರ್ಣನೆ

*ಅನಿಶಂ ದಿವ್ಯವಾದಿತ್ರೈರ್ನೃತ್ತೈರ್ಗೀತೈಶ್ಚ ಸಾ ಸಭಾ | ಅಶೂನ್ಯಾ ರುಚಿರಾ ಭಾತಿ ಗನ್ಧರ್ವಾಪ್ಸರಸಾಂ ಗಣೈಃ || ೦೨. ೦೧೦ .೧೩ || 

ಕಿಂನರಾ ನಾಮ ಗನ್ಧರ್ವಾ ನರಾ ನಾಮ ತಥಾಪರೇ |  ಮಣಿಭದ್ರೋಽಥ ಧನದಃ ಶ್ವೇತಭದ್ರಶ್ಚ ಗುಹ್ಯಕಃ || ೦೨. ೦೧೦ .೧೪ || 

 ಕಶೇರಕೋ ಗಣ್ಡಕಣ್ಡುಃ ಪ್ರದ್ಯೋತಶ್ಚ ಮಹಾಬಲಃ | ಕುಸ್ತುಮ್ಬುರುಃ ಪಿಶಾಚಶ್ಚ ಗಜಕರ್ಣೋ ವಿಶಾಲಕಃ || ೦೨. ೦೧೦ .೧೫ || 

ವರಾಹಕರ್ಣಃ ಸಾನ್ದ್ರೋಷ್ಠಃ ಫಲಭಕ್ಷಃ ಫಲೋದಕಃ |  ಅಙ್ಗಚೂಡಃ ಶಿಖಾವರ್ತೋ ಹೇಮನೇತ್ರೋ ವಿಭೀಷಣಃ || ೦೨. ೦೧೦ .೧೬ || 

ಪುಷ್ಪಾನನಃ ಪಿಙ್ಗಲಕಃ ಶೋಣಿತೋದಃ ಪ್ರವಾಲಕಃ |  ವೃಕ್ಷವಾಸ್ಯನಿಕೇತಶ್ಚ ಚೀರವಾಸಾಶ್ಚ ಭಾರತ || ೦೨. ೦೧೦ .೧೭ || 

ಏತೇ ಚಾನ್ಯೇ ಚ ಬಹವೋ ಯಕ್ಷಾಃ ಶತಸಹಸ್ರಶಃ* || ೦೨. ೦೧೦ .೧೫ || 

ನಾರದರು ಯುಧಿಷ್ಠಿರನಿಗೆ ಕುಬೇರನ ಆಸ್ಥಾನದ ವೈಭವನ್ನು ವರ್ಣನೆ ಮಾಡುತ್ತಾರೆ.

ಗಂಧರ್ವ,ಅಪ್ಸರೆಯರು, ಯಕ್ಷರುಗಳಾದ ಮಣಿಭದ್ರ,ಧನದ,ಶ್ವೇತಭದ್ರ,ಗುಹ್ಯಕ,ಕೇಶರಕ, ಗಂಡಕಂಡು, ಪ್ರದ್ಯೋತ,ಮಹಾಬಲ,ಕುಸ್ತುಂಬುರು, ಪಿಶಾಚ, ಗಜಕರ್ಣ, ವಿಶಾಲಕ,ವರಾಹಕರ್ಣ,ಸಾಂದ್ರೋಷ್ಠ , ಫಲಭಕ್ಷ, ಅಂಗಚೂಡ,ಶಿಖಾವರ್ತ, ಹೇಮನೇತ್ರ,ವಿಭೀಷಣ , ಪುಷ್ಪಾನನ,ಪಿಂಗಲಕ, ಶೋಣಿತೋದ, ಪ್ರವಾಲಕ , ವೃಕ್ಷವಾಸ, ನಿಕೇತ,ಚೀರವಾಸ ಮತ್ತೂ ಸಹಸ್ರಾರು ಯಕ್ಷರುಗಳು  ನೃತ್ತ-ನೃತ್ಯಪದವಿನ್ಯಾಸಗಳ ಧ್ವನಿಗಳಿಂದಲೂ , ಸುಮಧುರ ಗಾನಗಳಿಂದಲೂ ವೀಣಾಮೃದಂಗಾದಿ ವಾದ್ಯಗೋಷ್ಠಿಗಳಿಂದಲೂ ಕೆಬೇರನನ್ನು ಸಂತೋಷಪಡಿಸುತ್ತಾ ಸೇವಿಸುತಿರುತ್ತಾರೆ. 

ಈ ಮೇಲಿನ ಪ್ರಸಂಗವನ್ನು ಕಾಳಿದಾಸನೂ ತನ್ನ ಮೇಘದೂತದಲ್ಲಿ ವರ್ಣಿಸಿದ್ದಾನೆ.

ಮೇಘದೂತ :- 

*ಅಕ್ಷಯ್ಯಾನ್ತರ್ಭವನನಿಧಯಃ ಪ್ರತ್ಯಹಂ ರಕ್ತಕಣ್ಠೈರುದ್ಗಾಯದ್ಭಿರ್ಧನಪತಿಯಶಃ ಕಿಂನರೈರ್ಯತ್ರ ಸಾರ್ಧಮ್*  |

ಧನಪತಿಯಾದ ಕುಬೇರನ ಆಸ್ಥಾನದಲ್ಲಿ ಪ್ರತಿನಿತ್ಯವೂ ಯಕ್ಷಕಿನ್ನರರು ಮುಕ್ತಕಂಠದಿಂದ ಉಚ್ಚಸ್ಥಾಯಿಯಲ್ಲಿ ಹಾಡುಗಳನ್ನು ಹೇಳುತ್ತಿದ್ದರು. 

ಹರಿ ಓಮ್ ತತ್ ಸತ್

ಸತ್ಯಪ್ರಕಾಶ

ಮುಂದಿನ ಭಾಗ

ಯಕ್ಷಗಾನ-ಭಾಗ-೦೨

ಪೌರಾಣಿಕ ಮತ್ತು ಐತಿಹಾಸಿಕ  ಹಿನ್ನೆಲೆ.

ಸನಾತನ ಗ್ರಂಥದಲ್ಲಿರುವ ಯಕ್ಷಗಾನದ ಲಕ್ಷಣಗಳು .